×
Ad

ಗುರುದೇವ ಶಿಕ್ಷಣ ಪ್ರತಿಷ್ಠಾನದಿಂದ ಶೈಕ್ಷಣಿಕ ಸ್ಕಾಲರ್‌ಶಿಪ್

Update: 2020-02-10 23:39 IST

ಮಂಗಳೂರು, ಫೆ.10: ನಗರದ ಪಿವಿಎಸ್ ವೃತ್ತದ ಬಳಿ ಇರುವ ಬ್ರಿಲಿಯಂಟ್ ಪಿಯು ಕಾಲೇಜನ್ನು ನಡೆಸುತ್ತಿರುವ ಗುರುದೇವ ಶಿಕ್ಷಣ ಪ್ರತಿಷ್ಠಾನವು ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕ ಸ್ಕಾಲರ್‌ಶಿಪ್ ಒದಗಿಸುತ್ತಿದೆ.

2020-21ರ ಸಾಲಿನಲ್ಲಿ ಸುಮಾರು 100 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ರೂಪದಲ್ಲಿ ಬ್ರಿಲಿಯಂಟ್ ಪಿಯು ಕಾಲೇಜಿನ ಶುಲ್ಕದಲ್ಲಿ 5000 ರೂ.ನಿಂದ 50,000 ರೂ.ವರೆಗೆ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರ ಶಿಫಾರಸಿನ ಮೇರೆಗೆ 10,000 ರೂ. ಮೊತ್ತದ ಪ್ರತ್ಯೇಕ ಸ್ಕಾಲರ್‌ಶಿಪ್ ನೀಡಲಾಗುವುದು.

ಬ್ರಿಲಿಯಂಟ್ ಪಿಯು ಕಾಲೇಜಿನಲ್ಲಿ ಅನುಭವಿ ಉಪನ್ಯಾಸಕರು ಹಾಗೂ ಅತ್ಯುತ್ತಮ ಬೋಧನಾ ವಿಧಾನಗಳಿಂದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಸೈಯನ್ಸ್ ವಿದ್ಯಾರ್ಥಿಗಳಿಗೆ ಪಿಸಿಎಂಬಿ ಅಥವಾ ಪಿಸಿಎಂಎಸ್ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

ಕಾಮರ್ಸ್ ವಿದ್ಯಾರ್ಥಿಗಳು ಇಕನಾಮಿಕ್ಸ್, ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ ಮತ್ತು ಸ್ಟಾಟಿಸ್ಟಿಕ್ಸ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಯಮಿತ ತರಗತಿಯ ಬಳಿಕ ವಿದ್ಯಾರ್ಥಿಗಳಿಗೆ ಸಿಇಟಿ, ಕಾಮೆಡ್-ಕೆ, ನೀಟ್ ಮತ್ತು ಜೆಇಇ-ಮೈಯ್ನಾಗೆ ತರಬೇತಿ ನೀಡಲಾಗುವುದು.

ದಾಖಲಾತಿ ಹಾಗೂ ಇತರ ವಿವರಗಳಿಗೆ : ಬ್ರಿಲಿಯಂಟ್ ಪಿಯು ಕಾಲೇಜು, 3ನೇ ಮಹಡಿ, ಪಿವಿಎಸ್ ಸೆಂಟಿನರಿ ಬಿಲ್ಡಿಂಗ್, ಪಿವಿಎಸ್ ವೃತ್ತದ ಬಳಿ, ಕೊಡಿಯಾಲಬೈಲ್, ಮಂಗಳೂರು. ಫೋನ್: 0824- 2983995 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News