×
Ad

ರಾಜ್ಯ ಮಿನಿ ಒಲಿಂಪಿಕ್ಸ್ : ಈಜು ಸ್ಪರ್ಧೆಯಲ್ಲಿ : ಶ್ರೀಶಣ್ ಬಂಗೇರಗೆ ಪದಕ

Update: 2020-02-11 17:41 IST

ಮಂಗಳೂರು : ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್ -2020 ಬಸವನಗುಡಿ ಈಜುಕೊಳದಲ್ಲಿ ಇತ್ತೀಚೆಗೆ ನಡೆಯಿತು. 

ದಕ್ಷಿಣ ಕನ್ನಡ ಜಿಲ್ಲೆಯಿಂದ ಅನೇಕ ಈಜುಗಾರರು ಭಾಗವಹಿಸಿದ್ದು, ಶ್ರೀಶಣ್ ಬಂಗೇರ 50 ಮೀಟರ್ ಬಟರ್ ಫ್ಲೈ ನಲ್ಲಿ ಕಂಚಿನ ಪದಕ ಗೆದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಪದಕ ಪಡೆದ ಏಕೈಕ ಈಜುಗಾರರಾಗಿದ್ದಾರೆ.

ಶ್ರೀಶಣ್  ಮುಖ್ಯ ತರಬೇತುದಾರರಾದ  ವಿ. ರಾಮಕೃಷ್ಣ ರಾವ್ ಅವರ ನೇತೃತ್ವದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹಿರಿಯ ಕೋಚ್ ರಾಜೇಶ್ ಆಂಟನಿ ಬೆಂಗ್ರೆ, ಸಹಾಯಕ ಕೋಚ್  ಕೆ ನಾಗರಾಜ್, ಸಂಕೇತ್ ಬೆಂಗ್ರೆ ಅವರ ನೇತೃತ್ವದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News