ಎನ್‌ಆರ್‌ಸಿ: ಮಕ್ಕಳನ್ನು ಬಂಧನ ಕೇಂದ್ರದಲ್ಲಿಡುವುದಿಲ್ಲ ಎಂದ ಕೇಂದ್ರ ಸರಕಾರ

Update: 2020-02-11 14:40 GMT

ಹೊಸದಿಲ್ಲಿ, ಫೆ.11: ಅಸ್ಸಾಂನಲ್ಲಿ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿರುವ ಮಕ್ಕಳನ್ನು ಅವರ ಹೆತ್ತವರಿಂದ ಪ್ರತ್ಯೇಕಿಸಿ ಬಂಧನ ಕೇಂದ್ರದಲ್ಲಿ ಇರಿಸಲಾಗುವುದಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.

ಹೆತ್ತವರ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿ ಸೇರಿದ್ದು ಮಕ್ಕಳ ಹೆಸರು ಸೇರ್ಪಡೆಗೊಳ್ಳದಿರುವ ಮತ್ತು ಈ ಕುರಿತ ಅರ್ಜಿಯ ಅಂತಿಮ ನಿರ್ಧಾರ ಪ್ರಕಟವಾಗದ ಪ್ರಕರಣಗಳಲ್ಲಿ ಮಕ್ಕಳನ್ನು ಬಂಧನ ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.

ಎನ್‌ಆರ್‌ಸಿ ಕುರಿತ ಹಕ್ಕು ಸಾಧನೆ ಮತ್ತು ಆಕ್ಷೇಪಗಳ ವಿಲೇವಾರಿಗೆ ಇರುವ ಅನುಮೋದಿತ ಪ್ರಮಾಣಿತ ಕಾರ್ಯಾಚರಣಾ ವಿಧಾನದಲ್ಲಿ , ಪಟ್ಟಿಯಿಂದ ಹೊರಗುಳಿದಿರುವ ಮಕ್ಕಳಿಗೆ ಸಂಬಂಧಪಟ್ಟಂತೆ ನಿರ್ದಿಷ್ಟ ನಿಬಂಧನೆಗಳನ್ನು ಸೂಚಿಸಲಾಗಿದೆ. ಮಕ್ಕಳನ್ನು ಬಂಧನ ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಅಟಾರ್ನಿ ಜನರಲ್ ಜನವರಿ 6ರಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News