ಮಂಗಳೂರು : ಇನ್‍ಲ್ಯಾಂಡ್ ಇನ್‍ಡೋರ್ಸ್‍ಗೆ 'ಐಡಿಡಬ್ಲ್ಯೂಎ 2020' ಪ್ರಶಸ್ತಿ
ಮಂಗಳೂರು : ಇಂಡಿಯನ್ ಡಿಸೈನ್ ಸ್ಕೂಲ್ ಮತ್ತು ಎಕೆ ಗ್ರೂಪ್ ಸಂಯುಕ್ತವಾಗಿ ಆಯೋಜಿಸಿದ್ದ 'ಐಡಿಡಬ್ಲ್ಯೂಎ 2020' (ಇಂಟೀರಿಯರ್ ಡಿಸೈನ್ ವಾವ್ ಅವಾರ್ಡ್ಸ್) ಸಮಾರಂಭದಲ್ಲಿ ಕರ್ನಾಟಕದ ಅಗ್ರಗಣ್ಯ ಒಳಾಂಗಣ ವಿನ್ಯಾಸ ಕಂಪೆನಿಯಾದ ಇನ್‍ಲ್ಯಾಂಡ್ ಇನ್‍ಡೋರ್ಸ್‍ಗೆ ಅತ್ಯುತ್ತಮ ವಸತಿ ಅಪಾರ್ಟ್‍ಮೆಂಟ್ ಒಳಾಂಗಣ ಯೋಜನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯದ ಅಗ್ರಗಣ್ಯ ವಾಸ್ತುಶಿಲ್ಪಿ ಮತ್ತು ಐಐಐಡಿ ಎನ್‍ಇಸಿ ಸದಸ್ಯಯರುಗಳಲ್ಲೊಬ್ಬರಾದ ಶ್ಯಾಮಲಾ ಪ್ರಭು ಅವರು ಮಂಗಳೂರಿನ ಗೇಟ್‍ವೇ ಹೋಟೆಲ್‍ನಲ್ಲಿ ಫೆ. 7ರಂದು ನಡೆದ ಸಮಾರಂಭದಲ್ಲಿ ಇನ್‍ಡೋರ್ಸ್‍ನ ಆಡಳಿತ ಪಾಲುದಾರ ಮೆರಾಜ್ ಯೂಸುಫ್ ಸಿರಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಐಡಿಡಬ್ಲ್ಯೂಎ ಪ್ರಶಸ್ತಿಯನ್ನು ಐಡಿಎಸ್ (ಇಂಡಿಯನ್ ಸ್ಕೂಲ್ ಆಫ್ ಡಿಸೈನ್) ಮತ್ತು ಎಕೆ ಗ್ರೂಪ್ ಸಂಯುಕ್ತವಾಗಿ ನೀಡುತ್ತವೆ. ಇದು ರಾಜ್ಯದ ಉತ್ತಮ ಒಳಾಂಗಣ ವಿನ್ಯಾಸ ಕಂಪೆನಿಗಳ ಪೈಕಿ ಅತ್ಯಂತ ವಿಶಿಷ್ಟ ಸಾಧಕರನ್ನು ಗುರುತಿಸಿ, ಒಳಾಂಗಣ ವಿನ್ಯಾಸ ಮತ್ತು ಅನುಷ್ಠಾನ ಕ್ಷೆತ್ರದಲ್ಲಿ ಅವರ ಸಾಧನೆಗಾಗಿ ಗೌರವಿಸುತ್ತದೆ. ಹಲವು ಮಾನದಂಡಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ದೇಶದ ಅತ್ಯುನ್ನತ ವಾಸ್ತುಶಿಲ್ಪಿಗಳೆನಿಸಿಕೊಂಡ ವಾಸ್ತುಶಿಲ್ಪಿ ನಮಿತ್ ಟಂಡನ್ ಮತ್ತು ಪಲ್ಲವಿ ಪ್ರಕಾಶ್ ಅವರನ್ನೊಳಗೊಂಡ ತೀರ್ಪುಗಾರರ ತಂಡ ಪ್ರಶಸ್ತಿ ಕೊಡಲು ಆಯ್ಕೆ ಮಾಡಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಇನ್‍ಲ್ಯಾಂಡ್ ಇನ್‍ಡೋರ್ಸ್‍ನ ಆಡಳಿತ ಪಾಲುದಾರ ಮೆರಾಜ್ ಯೂಸುಫ್ ಸಿರಾಜ್, "ರಾಜ್ಯದಲ್ಲಿ ಒಳಾಂಗಣ ವಿನ್ಯಾಸಕ್ಕೆ ಅಪಾರ ಕೊಡುಗೆ ನೀಡಿದ ಒಳಾಂಗಣ ವಿನ್ಯಾಸ ಕ್ಷೇತ್ರದ ಎರಡು ಪ್ರತಿಷ್ಠಿತ ಸಂಸ್ಥೆಗಳು ನೀಡುವ ಈ ಪ್ರಶಸ್ತಿ ಬಂದಿರುವುದಕ್ಕೆ ಅತೀವ ಸಂತಸವಾಗುತ್ತಿದೆ. ಇಂಥ ಪ್ರಶಸ್ತಿಗಳು ಸವಾಲುದಾಯಕ ಹಾದಿಯನ್ನು ತುಳಿದ ನಮ್ಮಂಥ ಯುವ ಉದ್ಯಮಶೀಲರಿಗೆ ಉತ್ತೇಜನ ನೀಡಲಿವೆ. ಒಳಾಂಗಣ ವಿನ್ಯಾಸ ಎನ್ನುವುದು ಭಾರತದಲ್ಲಿ ಹೊಸ ಪರಿಕಲ್ಪನೆಯಾಗಿದೆ. ಈಗಷ್ಟೇ ಜನಸಾಮಾನ್ಯರು ಒಳಾಂಗಣ ವಿನ್ಯಾಸದತ್ತ ಗಮನ ಹರಿಸುತ್ತಿದ್ದು, ತಮ್ಮ ಜೀವನ ಶೈಲಿಗನುಗುಣವಾಗಿ ಅಥವಾ ವ್ಯವಹಾರ ಸಿದ್ಧಾಂತದ ಪೀಠೋಪಕರಣ ಹಾಗೂ ಫಿಟ್ಟಿಂಗ್‍ಗಳನ್ನು ಒಳಾಂಗಣ ವಿನ್ಯಾಸವಾಗಿ ರೂಪಿಸಿಕೊಳ್ಳುವ ಪ್ರವೃತ್ತಿ ಮಂಗಳೂರಿನಂಥ ನಗರದಲ್ಲಿ ಕೂಡಾ ಕ್ಷಿಪ್ರವಾಗಿ ಬೆಳಯುತ್ತಿದೆ. ವಿನ್ಯಾಸ ಹಾಗು ಸೃಜನಶೀಲತೆಗೆ ಮೌಲ್ಯವಿರುವ ಈ ಕ್ರಿಯಾತ್ಮಕ ಕ್ಷೇತ್ರದ ಭಾಗವಾಗಿ. ಹಲವು ಮಂದಿ ಪ್ರತಿಭಾವಂತ ಯುವಕರು ಈ ಕ್ಷೇತ್ರಕ್ಕೆ ಬರುತ್ತಿದ್ದು, ಗ್ರಾಹಕರಿಗೆ ವೈವಿಧ್ಯಮಯ ಶ್ರೇಣಿಯ ಒಳಾಂಗಣ ವಿನ್ಯಾಸವನ್ನು ಒದಗಿಸುವ ಈ ಪ್ರತಿಭೆಗಳನ್ನು ಪೋಷಿಸಲು ನಮ್ಮ ಕಂಪೆನಿಗೆ ಹೆಮ್ಮೆ ಎನಿಸುತ್ತಿದೆ" ಎಂದು ಹೇಳಿದರು.
ಇನ್‍ಲ್ಯಾಂಡ್ ಇನ್‍ಡೋರ್ಸ್ ಸಂಸ್ಥೆಯನ್ನು ಪ್ರಶಸ್ತಿ ವಿಜೇತ ಸಂಸ್ಥೆಯಾಗಿ ರೂಪಿಸಲು ಅಚಲ ಮಾರ್ಗದರ್ಶನ ನೀಡಿದ ತಂದೆ ಹಾಗೂ ಇನ್‍ಲ್ಯಾಂಡ್ ಗ್ರೂಪ್‍ನ ಅಧ್ಯಕ್ಷ ಸಿರಾಜ್ ಅಹ್ಮದ್ ಮತ್ತು ಬೆಂಬಲ ನೀಡಿದ ಇನ್‍ಡೋರ್ಸ್ ತಂಡದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇನ್‍ಲ್ಯಾಂಡ್ ಇನ್‍ಡೋರ್ಸ್ ಇನ್‍ಲ್ಯಾಂಡ್ ಸಂಸ್ಥೆಯ ಸಮೂಹ ಭಾಗವಾಗಿದ್ದು, ಬಜೆಟ್ ಪ್ಯಾಕೇಜ್‍ನಿಂದ ಹಿಡಿದು ಹೈ ಎಂಡ್ ವಿಶೇಷ ಅಗತ್ಯತೆಯ ಟರ್ನ್‍ಕೀ ಯೋಜನೆಗಳ ವಿನ್ಯಾಸ ಮತ್ತು ಒಳಾಂಗಣಗಳ ವಿನ್ಯಾಸಗಳನ್ನು ಕಾರ್ಯಗತಗೊಳಿಸುವಲ್ಲಿ ಮುಂಚೂಣಿ ಸಂಸ್ಥೆಯಾಗಿದೆ.
ಐದು ವರ್ಷಗಳ ಅಲ್ಪಾವಧಿಯಲ್ಲಿ ಈ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಂಪೆನಿ ಸಾಧಿಸಿದ್ದು, ಇಂದು ರಾಜ್ಯದ ಅಗ್ರಗಣ್ಯ ಒಳಾಂಗಣ ವಿನ್ಯಾಸ ಕಂಪೆನಿಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ. ಪ್ರಮುಖ ಮನೆಗಳು, ವಿಲ್ಲಾಗಳು, ಅಪಾರ್ಟ್‍ಮೆಂಟ್‍ಗಳಿಂದ ಹಿಡಿದು ಕಾರ್ಪೊರೇಟ್ ಕಚೇರಿಗಳು, ಅತ್ಯುನ್ನತ ಶೋರೂಂಗಳು, ರೆಸ್ಟೋರೆಂಟ್‍ಗಳು, ಕೆಫೆ, ಹೋಟೆಲ್, ಸ್ಪಾ, ಜಿಮ್ನಾಶಿಯಂ ಮತ್ತು ಇತರ ವಾಣಿಜ್ಯ ಮಳಿಗೆಗಳ ಒಳಾಂಗಣ ವಿನ್ಯಾಸ ಯೋಜನೆಗಳನ್ನು ಕಾರ್ಯಗತಗೊಳಿಸಿದೆ.
ಇನ್‍ಲ್ಯಾಂಡ್ ಇನ್‍ಡೋರ್ಸ್ ವಿಶಿಷ್ಟ ಯೋಜನೆ ಹಾಗೂ ವಿನ್ಯಾಸಗಳನ್ನು ಹೊಂದಿದ್ದು, ಇದರ ಆರಂಭದಲ್ಲಿ ಗ್ರಾಹಕರ ಜತೆ ವಿಸ್ತೃತವಾದ ಚರ್ಚೆ ನಡೆಸಿ ಅವರ ಅಭಿಪ್ರಾಯವನ್ನು ಪಡೆಯಲಾಗುತ್ತದೆ. ಬಳಿಕ ಸೂಕ್ಷ್ಮಾತಿಸೂಕ್ಷ್ಮ ವೇಳಾಪಟ್ಟಿ ತಯಾರಿಕೆ, ಬಜೆಟ್ ಸಿದ್ಧಪಡಿಸುವುದು ಹಾಗೂ ತೀವ್ರ ಮೇಲ್ವಿಚಾರಣೆಯನ್ನು ಕೆಲಸ ಕಾರ್ಯಗತಗೊಳಿಸುವ ಮೂಲಕ ಗ್ರಾಹಕರಿಗೆ ಸಕಾಲಿಕ ಹಾಗೂ ಅತ್ಯುನ್ನತ ಗುಣಮಟ್ಟದ ಒಳಾಂಗಣ ವಿನ್ಯಾಸವನ್ನು ಒದಗಿಸಲಾಗುತ್ತದೆ. ಇನ್‍ಲ್ಯಾಂಡ್ ಇನ್‍ಡೋರ್ಸ್ ಅತ್ಯುನ್ನತ ಗುಣಮಟ್ಟದ ವಿನ್ಯಾಸ ಪ್ರತಿಭೆ ಹಾಗೂ ಮೇಲ್ವಿಚಾರಕರು, ತಂತ್ರಜ್ಞರು ಸೇರಿದಂತೆ ಅತ್ಯಧಿಕ ಕೌಶಲದ ಕಾರ್ಯಪಡೆಯನ್ನು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹೊಂದಿದೆ. ಈ ಮೂಲಕ ಪ್ರಸ್ತುತ ಇರುವ ವಿನ್ಯಾಸದ ಮಾನದಂಡಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಒಯ್ಯುವ ಜತೆಗೆ ಒಳಾಂಗಣ ವಿನ್ಯಾಸ ಉದ್ಯಮದಲ್ಲಿ ನಿಖರ ಗುಣಮಟ್ಟದ ಖ್ಯಾತಿಯನ್ನೂ ಹೊಂದಿದೆ.
ಅಲ್ಪಾವಧಿಯಲ್ಲಿ ಇನ್‍ಲ್ಯಾಂಡ್ ಇನ್‍ಡೋರ್ಸ್ ಕರ್ನಾಟಕದ ಅಗ್ರಗಣ್ಯ ಬಿಲ್ಡರ್ ಗಳ ಜತೆ ಅಪಾರ್ಟ್‍ಮೆಂಟ್‍ಗಳ ಒಳಾಂಗಣ ವಿನ್ಯಾಸಕ್ಕಾಗಿ ಕಾರ್ಯ ನಿರ್ವಹಿಸಿದ್ದು, ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳಿಗೂ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಹೊಂದಿದೆ. ಇನ್‍ಲ್ಯಾಂಡ್ ಇನ್‍ಡೋರ್, ಒಳಾಂಗಣ ವಿನ್ಯಾಸ ಕ್ಷೇತ್ರದಲ್ಲಿ ಮೊದಲ ಆಯ್ಕೆಯಾಗಿದೆ.
ಭವಿಷ್ಯದ ಬಗ್ಗೆ ಮಾತನಾಡಿದ ಮೆರಾಜ್, "ವಿಶ್ವದ ವಿವಿಧೆಡೆಗಳ ಹೊಸ ಪರಿಕಲ್ಪನೆಗಳು ಮತ್ತು ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸಲಾಗುತ್ತಿದ್ದು, ಭವಿಷ್ಯವು ಇನ್ನಷ್ಟು ಸ್ಪಧಾತ್ಮಕ ದಿನಗಳಿಂದ ಕೂಡಿರುತ್ತದೆ ಎಂಬ ನಿರೀಕ್ಷೆ ನಮ್ಮದು. ಮುಂಬರುವ ಒಳಾಂಗಣ ಕ್ರಾಂತಿಯಲ್ಲಿ ಇನ್‍ಲ್ಯಾಂಡ್ ಇನ್‍ಡೋರ್ಸ್ ಸಂಸ್ಥೆಯು ಮುಂಚೂಣಿಯಲ್ಲಿರುತ್ತದೆ ಎಂಬ ಖಾತರಿಯನ್ನು ನೀಡುತ್ತೇವೆ ಎಂದರು.
ಇನ್‍ಲ್ಯಾಂಡ್ ಇನ್‍ಡೋರ್ಸ್ ಮಂಗಳೂರು ಕಚೇರಿ: 3ನೇ ಮಹಡಿ, ಇನ್‍ಲ್ಯಾಂಡ್ ಆರ್ನೆಟ್, ನವಭಾರತ ಸರ್ಕಲ್, ಮಂಗಳೂರು- 5750003. (interiors@inlandindoors.com)
ಬೆಂಗಳೂರು ಕಚೇರಿ: ನಂ. 218, ಸಿಬಿಐ ಮುಖ್ಯ ರಸ್ತೆ, 4ನೇ ಮೈನ್, ಆರ್ ಟಿ ನಗರ, ಬೆಂಗಳೂರು- 560032 (interiors.blr@inlandindoors.com)
www.inlandindoors.net, ದೂರವಾಣಿ: 9686599099; 8296195299 ಎಂದು ಪ್ರಕಟನೆ ತಿಳಿಸಿದೆ.