ದರ್ಶನದ ಮಾರ್ಗ ಬದಲಾವಣೆಗೆ ಉತ್ತಮ ಸ್ಪಂದನೆ: ಅದಮಾರು ಶ್ರೀ
Update: 2020-02-11 20:37 IST
ಉಡುಪಿ, ಫೆ.11: ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನದ ಮಾರ್ಗವನ್ನು ಬದಲಾಯಿಸಿರುವುದರ ಬಗ್ಗೆ ಭಕ್ತರಿಂದ ಒಳ್ಳೆಯ ಸ್ಪಂದನೆ ದೊರೆಯುತ್ತಿದ್ದು, ಯಾವುದೇ ನೂಕುನುಗ್ಗಲು ಇಲ್ಲದೆ ಭಕ್ತರಿಗೆ ಕೂಡಲೇ ದೇವರ ದರ್ಶನ ಪಡೆಯಲು ಸಾಧ್ಯವಾಗುತ್ತಿದೆ ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಹೊಸ ಮಾರ್ಗದಿಂದ ಭಕ್ತರು ಅನಾಸಯವಾಗಿ ದೇವರ ದರ್ಶನ ಮಾಡುತ್ತಿದ್ದಾರೆ. ಮೊದಲು ದೇವರ ದರ್ಶನ ಮಾಡಲು ಅರ್ಧ ಗಂಟೆ ತಗಲುತ್ತಿದ್ದರೆ, ಈಗ ಕೇವಲ ಐದೇ ನಿಮಿಷ ಸಾಕಾಗುತ್ತಿದೆ. ಇದೆಲ್ಲವೂ ತಾತ್ಕಾ ಲಿಕವಾಗಿದ್ದು, ಮುಂದೆ ಭಕ್ತರ ಸ್ಪಂದನೆ ನೋಡಿಕೊಂಡು ಶಾಶ್ವತವನ್ನಾಗಿ ಸುವ ಉದ್ದೇಶ ಹೊಂದಲಾಗಿದೆ ಎಂದರು.