×
Ad

ಹಾಸ್ಟೆಲ್ ನಲ್ಲಿ ಕಳಪೆ ಆಹಾರ ಆರೋಪ: ಮಂಗಳೂರು ವಿವಿ ವಿದ್ಯಾರ್ಥಿಗಳಿಂದ‌‌‌‌ ಧರಣಿ

Update: 2020-02-11 21:20 IST

ಮಂಗಳೂರು : ಮಂಗಳೂರು‌ ವಿಶ್ವವಿದ್ಯಾನಿಲಯದ ಪುರುಷರ ವಸತಿ ಗ್ರಹದಲ್ಲಿ ಕಳಪೆ‌ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾಸ್ಟೆಲ್  ವಿದ್ಯಾರ್ಥಿಗಳು ಮಂಗಳೂರು ವಿವಿ ಆಡಳಿತ ಸೌಧದ ಬಳಿ ಮಂಗಳವಾರ ಧರಣಿ ನಡೆಸಿದರು.

ಕಳೆದ ಕೆಲವು ದಿನಗಳಿಂದ ಮೆಸ್ ಕಾಂಟ್ಯಾಕ್ಟ್ ‌ಕೂಡಾ ಬದಲಾವಣೆಯಾಗಿದ್ದು ಜೊತೆಗೆ‌ ಅಡುಗೆಯವರು ಕೂಡಾ ಬದಲಾಗಿದ್ದು, ವಿದ್ಯಾರ್ಥಿಗಳಿಗೆ ಕಳಪೆ ಮಟ್ಟದ ಆಹಾರ ನೀಡುತ್ತಾರೆ. ಈ ಬಗ್ಗೆ ಸಾಕಷ್ಟು ಬಾರಿ ಅವರಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದಕ್ಕಾಗಿ‌ ನಾವು ವಿವಿ ಆಡಳಿತ ಸೌಧದ ಬಳಿ‌ ಧರಣಿ ನಡೆಸಿದ್ದೇವೆ. ಹಾಸ್ಟೆಲ್ ಸಮಿತಿಯ ಸದಸ್ಯರು ಹಾಗೂ‌ ಕುಲಸಚಿವರು ಸಮಸ್ಯೆಯನ್ನು‌ ಸರಿಪಡಿಸುವ ಬಗ್ಗೆ ಭರವಸೆ ನೀಡಿದ್ದು ಈ ನಿಟ್ಟಿನಲ್ಲಿ ಧರಣಿಯನ್ನು ತಾತ್ಕಾಲಿಕ ವಾಗಿ ನಿಲ್ಲಿಸಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News