ಕೊರೊನಾ ಸೋಂಕು ನಿಗ್ರಹಿಸಲು ಚೀನಾಕ್ಕೆ ಹೊಸ ಸಾಲ ಇಲ್ಲ: ವಿಶ್ವಬ್ಯಾಂಕ್

Update: 2020-02-11 16:36 GMT

ವಾಶಿಂಗ್ಟನ್, ಫೆ. 11: ವಿಶ್ವಬ್ಯಾಂಕ್ ಚೀನಾಕ್ಕೆ ಕೊರೋನವೈರಸ್ ಸೋಂಕನ್ನು ನಿಯಂತ್ರಿಸಲು ತಾಂತ್ರಿಕ ನೆರವನ್ನು ನೀಡುತ್ತಿದೆ, ಹೊಸ ಸಾಲಗಳನ್ನು ಕೊಡುತ್ತಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಡೇವಿಡ್ ಮ್ಯಾಲ್ಪಾಸ್ ಸೋಮವಾರ ಹೇಳಿದ್ದಾರೆ.

ಚೀನಾಕ್ಕೆ ನೆರವು ನೀಡುವುದಕ್ಕಾಗಿ ವಿಶ್ವ ಬ್ಯಾಂಕ್ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದೆ ಹಾಗೂ ಹಿಂದಿನ ಆರೋಗ್ಯ ಬಿಕ್ಕಟ್ಟುಗಳ ಬಗ್ಗೆ ಸಲಹೆಗಳನ್ನು ನೀಡುತ್ತಿದೆ ಎಂದು ಡೇವಿಡ್ ಮ್ಯಾಲ್ಪಾಸ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು. ಆದರೆ, ಚೀನಾಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ಬ್ಯಾಂಕ್ ಯಾವುದೇ ಯೋಜನೆ ಹೊಂದಿಲ್ಲ ಎಂದು ಹೇಳಿದ ಅವರು, ಸ್ವತಃ ಚೀನಾ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ ಎಂದರು.

‘‘ಚೀನಾದಲ್ಲಿ ಕೊರೋನವೈರಸ್ ಸೋಂಕನ್ನು ಶೀಘ್ರದಲ್ಲೇ ಹತೋಟಿಗೆ ತರಲು ಅವರಿಗೆ ಸಾಧ್ಯವಾಗುವ ನಿಟ್ಟಿನಲ್ಲಿ ನಾವು ಅವರಿಗೆ ನೆರವು ನೀಡುತ್ತೇವೆ’’ ಎಂದು ಸೋಮವಾರ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News