ಕರ್ನಾಟಕ ಬಂದ್ ಗೆ ಮಂಗಳೂರು ತಾಲೂಕು ಕರವೇ ಬೆಂಬಲ ಇಲ್ಲ: ಮಧುಸೂದನ ಗೌಡ
ಮಂಗಳೂರು, ಫೆ.12: ಡಾ।ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ನಾಳಿನ ಬಂದ್ ಹಾಗೂ ಪ್ರತಿಭಟನೆಗೆ ನಮ್ಮ ಬೆಂಬಲ ಇಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ .ನಾರಾಯಣ ಗೌಡ ಬಣದ ಮಂಗಳೂರು ತಾಲೂಕು ಅಧ್ಯಕ್ಷ ಮಧುಸೂದನ್ ಗೌಡ ತಿಳಿಸಿದ್ದಾರೆ
ಕರ್ನಾಟಕ ರಕ್ಷಣಾ ವೇದಿಕೆ ಕೇಂದ್ರ ಸಮಿತಿಯ ನಿರ್ಧಾರದಂತೆ ನಾಳೆ ನಡೆಯುವ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುವುದಿಲ್ಲ. ಆದರೆ ಕನ್ನಡಿಗರಿಗೆ ಉದ್ಯೋಗ ಹಾಗೂ ಮಹದಾಯಿ ವಿಚಾರದಲ್ಲಿ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಫೆಬ್ರವರಿ ಕೊನೆಯ ವಾರದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಕರವೇ ಕಳೆದ 10 ವರ್ಷಗಳಿಂದ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ರಾಜ್ಯಾದ್ಯಂತ ಅನೇಕ ಹೋರಾಟ ಮಾಡುತ್ತ ಬಂದಿದೆ. ಬಂದ್ ಆಚರಣೆಯಿಂದ ರಾಜ್ಯದ ಜನತೆಗೆ ತೊಂದರೆ ಇಷ್ಟವಿಲ್ಲದ ಕಾರಣ ನಾಳೆಯ ಬಂದ್ ಗೆ ಕರವೇ ಮಂಗಳೂರು ತಾಲೂಕು ಘಟಕ ಯಾವುದೇ ಬೆಂಬಲ ನೀಡುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಸಿದ್ದಾರೆ.