ದುಬೈ: ಬೆಂಕಿಯಿಂದ ಪತ್ನಿಯನ್ನು ರಕ್ಷಿಸಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಭಾರತೀಯ

Update: 2020-02-12 12:45 GMT
ಸಾಂದರ್ಭಿಕ ಚಿತ್ರ

ದುಬೈ: ದುಬೈಯ ಉಮ್ಮ್ ಅಲ್ ಖುವೈನ್ ಎಂಬಲ್ಲಿನ ಅಪಾರ್ಟ್‍ಮೆಂಟ್ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ತನ್ನ ಪತ್ನಿಯನ್ನು ರಕ್ಷಿಸುವ ಯತ್ನದಲ್ಲಿ 32 ವರ್ಷದ ಭಾರತೀಯ ಮೂಲದ ವ್ಯಕ್ತಿ ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಶೇ.90ರಷ್ಟು ಸುಟ್ಟ ಗಾಯಗಳುಂಟಾಗಿರುವ ಕೇರಳ ಮೂಲದ ಅನಿಲ್ ನಿನಾನ್ ಅಬುಧಾಬಿಯ ಅಫ್ರಖ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪತ್ನಿ ನೀನು ಕೂಡ ಅದೇ ಆಸ್ಪತ್ರೆಯಲ್ಲಿದ್ದು ಶೇ.10ರಷ್ಟು ಸುಟ್ಟ ಗಾಯಗಳುಂಟಾಗಿರುವ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದಂಪತಿಗೆ ನಾಲ್ಕು ವರ್ಷ ಪ್ರಾಯದ ಗಂಡು ಮಗುವಿದೆ.

ಈ ದುರ್ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಅವರ ಅಪಾರ್ಟ್‍ಮೆಂಟ್‍ನ ಹೊರಗಿದ್ದ ವಿದ್ಯುತ್ ಪೆಟ್ಟಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹತ್ತಿಕೊಂಡಿರಬೇಕೆಂದು ಶಂಕಿಸಲಾಗಿದ್ದು ಈ ಸಂದರ್ಭ ಅಲ್ಲಿದ್ದ ನೀನು ಅವರ ಮೈಗೆ ಬೆಂಕಿ ತಗಲಿದ್ದನ್ನು ಕಂಡು ಮನೆಯೊಳಗಿದ್ದ ಅನಿಲ್ ಓಡಿ ಬಂದು ಆಕೆಯನ್ನು ರಕ್ಷಿಸಲು ಯತ್ನಿಸುತ್ತಿರುವಾಗ ಅವರ ಮೈಗೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ.

ಘಟನೆಯ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News