ಫೆ.20ರಿಂದ ದೊಡ್ಡಣಗುಡ್ಡೆ ಉರೂಸ್ ಕಾರ್ಯಕ್ರಮ
Update: 2020-02-12 20:25 IST
ಉಡುಪಿ, ಫೆ.12: ದೊಡ್ಡಣಗುಡ್ಡೆ ರಹ್ಮಾನಿಯ್ಯ ಜುಮಾ ಮಸೀದಿ ವಠಾರದಲ್ಲಿ ಹಝ್ರತ್ ಅಶೈಖ್ ಅಹ್ಮದ್ ಅಲ್ ಹಾದಿ(ಖ.ಸಿ.)ರವರ 71ನೆ ಉರೂಸ್ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಫೆ.20ರಿಂದ ಫೆ.23ರವರೆಗೆ ಜರಗಲಿದೆ.
ಫೆ.20ರಂದು ಅಸರ್ ನಮಾಝ್ ಬಳಿಕ ಶೈಖುನಾ ಪೂಂಜಾಲಕಟ್ಟೆ ಉಸ್ತಾದ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದ್ದು, ಇಶಾ ನಮಾಝಿನ ಬಳಿಕ ಎಸ್ಸೆಸ್ಸೆಫ್ ದೊಡ್ಡಣಗುಡ್ಡೆ ಘಟಕದಿಂದ ಅಸ್ಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್, ಫೆ.21ರಂದು ಅಸ್ಸಯ್ಯದ್ ಕೋಟೇಶ್ವರ ತಂಙಳ್ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ನಡೆಯಲಿದೆ.
ಫೆ.22ರಂದು ಅಬ್ಬಾಸ್ ಮದನಿ ಬಂಡಾಡಿ ಅವರಿಂದ ಪ್ರವಚನ, ಸಮಾ ರೋಪ ಸಮಾರಂಭ ನಡೆಯಲಿದೆ. ಫೆ.23ರಂದು ಬೆಳಗ್ಗೆ 9ಗಂಟೆಗೆ ವೌಲಿದ್ ಪಾರಾಯಣ, 10ಗಂಟೆಗೆ ಸಂದಲ್ ಮೆರವಣಿಗೆ ಹಾಗೂ ಮಧ್ಯಾಹ್ನ 1ಗಂಟೆಗೆ ಅನ್ನದಾನ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.