ಪುನುಗು ಬೆಕ್ಕು ಅಕ್ರಮ ಸಾಗಾಟ: ಇಬ್ಬರ ಬಂಧನ

Update: 2020-02-12 15:02 GMT

ಕುಂದಾಪುರ, ಫೆ.12: ಅರಣ್ಯದಲ್ಲಿ ಹಿಡಿದ ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ದ.ಕ. ಜಿಲ್ಲೆಯ ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳ, ಫೆ.11ರಂದು ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಬಂಧಿಸಿದೆ.

ಕುಂದಾಪುರ ಹೈಕಾಡಿಯ ದತ್ತಾತ್ರೇಯ ನಗರದ ಅಸ್ಗರ್ ಅಲಿ(22) ಹಾಗೂ ಬಿದ್ಕಲಕಟ್ಟೆಯ ಶರತ್(23) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಇವರಿಂದ ಜೀವಂತ ಪುನುಗು ಬೆಕ್ಕು, ಪಂಜರ, ಮಾರುತಿ ಇಕೋ ಕಾರು, ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಹೊಳೆ ಶಂಕರನಾರಾಯಣ ಎಂಬಲ್ಲಿನ ಅರಣ್ಯದಲ್ಲಿ ಜೀವಂತವಾಗಿ ಹಿಡಿದ ಪುನುಗು ಬೆಕ್ಕನ್ನು ಇವರು ಮಾರಾಟಕ್ಕಾಗಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿ ದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ಜಯ ಕೆ. ನೇತೃತ್ವದ ತಂಡ ಆರೋಪಿಗಳ್ನು ಬಂಧಿಸು ವಲ್ಲಿ ಯಶಸ್ವಿಯಾಯಿತು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಬಳಿಕ ಹೆಚ್ಚಿನ ತನಿಖೆಗಾಗಿ ಅವರನ್ನು ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಗಳಿಗೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸುಂದರ್ ಶೆಟ್ಟಿ, ಉದಯ್, ರಾಮಕೃಷ್ಣ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News