×
Ad

ಮೀಸಲಾತಿ ಬಗ್ಗೆ ಸುಪ್ರೀಂ ತೀರ್ಪಿನ ವಿರುದ್ಧ ‘ಭಾರತ್ ಬಂದ್‌’ ಗೆ ಭೀಮ್ ಆರ್ಮಿ ಕರೆ

Update: 2020-02-12 22:51 IST

ಹೊಸದಿಲ್ಲಿ, ಜ. 12: ಸರಕಾರಿ ಉದ್ಯೋಗಕ್ಕೆ ನಿಯೋಜನೆ ಹಾಗೂ ಭಡ್ತಿಯಲ್ಲಿ ಮೀಸಲಾತಿ ನೀಡುವುದು ರಾಜ್ಯ ಸರಕಾರಕ್ಕೆ ಬಿಟ್ಟ ವಿಚಾರ. ಅಲ್ಲದೆ, ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಭೀಮ್ ಆರ್ಮಿಯ ವರಿಷ್ಠ ಚಂದ್ರಶೇಖರ್ ಆಝಾದ್ ಫೆಬ್ರವರಿ 23ರಂದು ಬಂದ್‌ಗೆ ಕರೆ ನೀಡಿದ್ದಾರೆ.

ತೀರ್ಪನ್ನು ಅಸಿಂಧುಗೊಳಿಸಲು ಆಧ್ಯಾದೇಶ ತರಲು ಸರಕಾರದ ಮೇಲೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶಾಸಕರ ಹಾಗೂ ಸಂಸದರು ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತನ್ನ ಸಂಘಟನೆ ಫೆಬ್ರವರಿ 16ರಂದು ಮಂಡಿ ಹೌಸ್‌ನಿಂದ ಸಂಸತ್ತಿನ ವರೆಗೆ ರ್ಯಾಲಿಯನ್ನು ಕೂಡ ನಡೆಸಲಿದೆ ಎಂದು ಆಝಾದ್ ಚಂದ್ರಶೇಖರ್ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News