ಗಾಂಜಾ ಸೇವನೆ: ಆರು ಮಂದಿ ವಶಕ್ಕೆ
Update: 2020-02-12 22:57 IST
ಉಡುಪಿ, ಫೆ.12: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಫೆ.11ರಂದು ಬೆಳಗ್ಗೆ 9ಗಂಟೆ ಸುಮಾರಿಗೆ ಗಾಂಜಾ ಸೇವನೆ ಮಾಡುತ್ತಿದ್ದ ಚಿಟ್ಪಾಡಿಯ ಧನುಷ್ ಕುಂದರ್(19), ಬಡಗುಬೆಟ್ಟುವಿನ ಕೌಶಿಕ್ ದೇವಾಡಿಗ(18) ಎಂಬವರನ್ನು ಉಡುಪಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ: ಗಾಂಜಾ ಸೇವನೆ ಮಾಡುತ್ತಿದ್ದ ಮಣಿಪಾಲದ ನ್ಯೂ ಇಂಟರ್ ನ್ಯಾಷನಲ್ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಾದ ಬ್ರಿಟ್ಟೊ ಕೆ.ಎಪನ್(19), ಜಿಬ್ರಾನ್ ಖಾನ್(20), ಜೆರ್ಮಿನ್ ಜೋಸೆಫ್(19) ಎಂಬವರನ್ನು ಮಣಿಪಾಲದ ಮನೀಶ್ ಅಪಾರ್ಟ್‌ಮೆಂಟ್ ಬಳಿ ಹಾಗೂ ಧ್ರುವ ಫಲಡೆಸೈ(19) ಎಂಬಾತನನ್ನು ಮಣಿಪಾಲ ಟೈಗರ್ ಸರ್ಕಲ್ ಬಳಿ ಫೆ.7ರಂದು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.