ಡೆಬಿಟ್ ಕಾರ್ಡ್ ನಂಬರ್ ಪಡೆದು ವಂಚನೆ: ದೂರು
Update: 2020-02-12 23:00 IST
ಉಡುಪಿ, ಫೆ.12: ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ನಂಬರ್ ಪಡೆದು ಲಕ್ಷಾಂತರ ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರಂಗ್ರಪಾಡಿಯ ನಿತಿನ್ ಕೃಷ್ಣ(24) ಎಂಬವರಿಗೆ ಫೆ.3ರಂದು ಎಕ್ಸಿಸ್ ಬ್ಯಾಂಕಿ ಅಧಿಕಾರಿಯೆಂದು ಹೇಳಿಕೊಂಡು ಕರೆ ಮಾಡಿದ ಅಪರಿಚಿತ ವ್ಯಕ್ತಿ, ಕ್ರೆಡಿಟ್ ಕಾರ್ಡಿನ ಸೇರ್ಪಡೆಯ ಶುಲ್ಕವನ್ನು ಸರಿಪಡಿಸುವುದಾಗಿ ಹೇಳಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡಗಳ ನಂಬ್ರ ಹಾಗೂ ಸಿವಿವಿ ನಂಬ್ರ ಮತ್ತು ಓ.ಟಿ.ಪಿ.ಯ ವಿವರಗಳನ್ನು ಪಡೆದು, ಕ್ರೆಡಿಟ್ ಕಾರ್ಡಿನಿಂದ 1,20,100ರೂ. ಹಾಗೂ ಡೆಬಿಟ್ ಕಾರ್ಡಿನಿಂದ 13,798ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.