ಪತಿಯ ಕಿರುಕುಳ ಆರೋಪ : ಮಹಿಳೆ ಆತ್ಮಹತ್ಯೆ

Update: 2020-02-12 18:16 GMT

ಮೂಡುಬಿದಿರೆ :  ಪತಿಯ ಸಂಶಯ ಮನೋಭಾವದ ಕಿರುಕುಳವನ್ನು ತಾಳಲಾರದೆ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆ ವ್ಯಾಪ್ತಿಯ ಒಂಟಿಕಟ್ಟೆಯಲ್ಲಿ ಬುಧವಾರ ನಡೆದಿದೆ. 

ಒಂಟಿಕಟ್ಟೆಯ ಮಹೇಶ್ ಎಂಬವರ ಪತ್ನಿ ಜಮುನ (38) ಆತ್ಯಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ಮಹೇಶ್ ಕಾರ್ಮಿಕನಾಗಿದ್ದು ಇತ್ತೀಚೆಗೆ ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸಿ ಹಿಂಸೆ ನೀಡುತ್ತಿದ್ದನಲ್ಲದೆ ಮನೆಯಿಂದ ಹೊರಗಡೆ ಹೋಗುವಾಗ ಪತ್ನಿಯನ್ನು ಕೋಣೆಯೊಳಗಡೆ ಹಾಕಿ ಹೊರಗಡೆಯಿಂದ ಚಿಲಕ ಹಾಕಿ ಹೋಗುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಜಮುನ ತವರು ಮನೆಯವರಿಗೂ ವಿಷಯ ತಿಳಿಸಿದ್ದಾರೆನ್ನಲಾಗಿದೆ.

ಈ ಬಗ್ಗೆ ಜಮುನ ಅವರ ತಾಯಿ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿ ತನ್ನ ಮಗಳ ಸಾವಿಗೆ ಮಹೇಶ್ ಕಾರಣ ಎಂದು ಆರೋಪಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News