×
Ad

ಫೆ. 16 : ಬ್ಲಡ್ ಸೈಬೋ ವತಿಯಿಂದ 3 ಕೇಂದ್ರಗಳಲ್ಲಿ ರಕ್ತದಾನ ಶಿಬಿರ

Update: 2020-02-13 15:31 IST

ಮಂಗಳೂರು: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ 3 ಕೇಂದ್ರಗಳಲ್ಲಿ  ಫೆ.16ರಂದು ಏಕಕಾಲದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಮಂಗಳೂರು ಸೆಕ್ಟರ್ ವತಿಯಿಂದ ಜೆಪ್ಪು ಮಹಾಕಾಳಿಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 142 ನೇ ಶಿಬಿರ, ಫರಂಗಿಪೇಟೆ ಸೆಕ್ಟರ್ ವತಿಯಿಂದ ತುಂಬೆ ಬಿ.ಎ.ಮೈದಾನದಲ್ಲಿ 143 ನೇ ಶಿಬಿರ, ಕಾವೂರು ಸೆಕ್ಟರ್ ವತಿಯಿಂದ ಶಾಂತಿನಗರ ಮೈದಾನದಲ್ಲಿ 144 ನೇ ಶಿಬಿರ, ಶಿಬಿರವು ಅಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಚೇರ್ಮೇನ್ ತೌಸಿಫ್ ಸ‌ಅದಿ ಹರೇಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News