×
Ad

ತುಂಬೆ: ಫೆ. 14 ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

Update: 2020-02-13 16:18 IST

ಫರಂಗಿಪೇಟೆ : ಕೇಂದ್ರ ಸರಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸಂವಿಧಾನ ಸಂರಕ್ಷಣಾ ಸಮಿತಿ ತುಂಬೆ ಇದರ ವತಿಯಿಂದ ಫೆ. 14 ರಂದು ಅಪರಾಹ್ನ 2:30ಕ್ಕೆ ತುಂಬೆ ಬಿಎ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಮುಖ್ಯ ಅತಿಥಿಯಾಗಿ ಮಾಜಿ ಸಚಿವೆ ಬಿಟಿ ಲಲಿತ್ ನಾಯಕ್, ಶಾಸಕ ಯುಟಿ ಖಾದರ್, ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್, ಪಿಎಫ್ಐ ರಾಜ್ಯಾಧ್ಯಕ್ಷ ಮೊಹಮ್ಮದ್ ಶಾಕಿಬ್, ಅಡ್ವಕೇಟ್ ಎಸ್ ಬಾಲನ್, ಸಾಮಾಜಿಕ ಹೋರಾಟಗಾರ ರಾ. ಚಿಂತನ್ ಮುಂತಾದವರು ಭಾಗವಹಿಲಿದ್ದಾರೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ತುಂಬೆ ಅಧ್ಯಕ್ಷ ಮೊಹಮ್ಮದ್ ಶರೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News