ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ: ಆರೋಪಿ ಸೆರೆ

Update: 2020-02-13 11:49 GMT

ಮಂಗಳೂರು, ಫೆ.13: ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಆತನಿಂದ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಸಮೀಪದ ಮುಹಮ್ಮದ್ ಮುಹೀರ್ ಪಟ್ಲ (24) ಬಂಧಿತ ಆರೋಪಿ.

ಬುಧವಾರ ಸಂಜೆ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಮುಹೀರ್‌ ಬಳಿಯಿದ್ದ ಎಮೆರ್ಜೆನ್ಸಿ ಲೈಟ್ ಮತ್ತು ಸೋಲಾರ್ ವಾಲ್‌ಲೈಟ್‌ನೊಳಗೆ 233.18 ಗ್ರಾಂ ತೂಕದ ಚಿನ್ನವನ್ನು ಅಡಗಿಸಿಟ್ಟಿರುವುದು ಕಂಡು ಬಂತು. ತಕ್ಷಣ ಆತನನ್ನು ಪೊಲೀಸರು ಬಂಧಿಸಿದ್ದು, ವಶಪಡಿಸಿಕೊಂಡ ಚಿನ್ನದ ಮೌಲ 9.39 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News