ಲ್ಯಾಂಡಿಂಗ್ ವೇಳೆ ತಪ್ಪೆಸಗಿದ ಆರೋಪ: ಇಬ್ಬರು ಸ್ಪೈಸ್‌ಜೆಟ್ ಪೈಲಟ್‌ಗಳ ಪರವಾನಿಗೆ ಅಮಾನತು

Update: 2020-02-13 15:22 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಫೆ.13: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ತಪ್ಪು ಎಸಗಿದ್ದ ಇಬ್ಬರು ಸ್ಪೈಸ್‌ಜೆಟ್ ಪೈಲಟ್‌ಗಳ ಪರವಾನಿಗೆಯನ್ನು ನಾಲ್ಕೂವರೆ ತಿಂಗಳ ಅವಧಿಗೆ ನಾಗರಿಕ ವಿಮಾನಯಾನ ನಿರ್ದೇಶಾಲಯದ (ಡಿಜಿಸಿಎ) ಪ್ರಧಾನ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

2019ರ ಅಕ್ಟೋಬರ್ 31 ರಂದು ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಸ್ಪೈಸ್‌ಜೆಟ್ 737 ವಿಮಾನವು ಲ್ಯಾಂಡಿಂಗ್ ವೇಳೆ ಪೈಲಟ್ ಮಾಡಿದ ತಪ್ಪಿನಿಂದಾಗಿ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಎಡಕ್ಕೆ ಜಾರಿದ್ದ ಪರಿಣಾಮ ವಿಮಾನವು ರನ್‌ವೇ ಅಂಚಿನ ದೀಪಗಳಿಗೆ ಹಾನಿ ಮಾಡಿತ್ತು. ಈ ಲೋಪದ ಬಗ್ಗೆ ತನಿಖೆ ನಡೆಸಿದ್ದ ನಿರ್ದೇಶನಾಲಯವು ಪೈಲಟ್‌ಗಳ ಲೋಪ ಸಾಬೀತಾದ ಕಾರಣ ಪರವಾನಗಿ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿತು ಎಂದು ಪ್ರಕಟನೆ ತಿಳಿಸಿದೆ.

ಲೋಪಕ್ಕೆ ಸಂಬಂಧಿಸಿದಂತೆ ಪೈಲಟ್ ಇನ್ ಕಮಾಂಡ್ ಮತ್ತು ಫಸ್ಟ್ ಆಫೀಸರ್‌ಗಳು ನೀಡಿರುವ ಉತ್ತರವನ್ನು ಡಿಜಿಸಿಎ ಒಪ್ಪಿಕೊಂಡಿಲ್ಲ. ಅವರಿಬ್ಬರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ಮಧ್ಯೆ ತಪ್ಪು ಮಾಡಿದ್ದ ಇಬ್ಬರೂ ಪೈಲಟ್‌ಗಳನ್ನೂ ಕೂಡ ಸ್ಪೈಸ್‌ಜೆಟ್ ಅಮಾನತು ಮಾಡಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News