ಯುಪಿಎಲ್ ಹರಾಜು ಅಂತ್ಯ: ಫೆ.18ರಂದು ಪಂದ್ಯಾವಳಿ

Update: 2020-02-13 15:40 GMT

 ಮಂಗಳೂರು, ಫೆ.13: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಪ್ರತಿಷ್ಠಿತ ಯುನಿವರ್ಸಿಟಿ ಪ್ರೀಮಿಯರ್ ಲೀಗ್ (ಯುಪಿಎಲ್) ಚುಟುಕು ಕ್ರಿಕೆಟ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆ ಮಂಗಳವಾರ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.

ಯುಪಿಎಲ್ ಕ್ರಿಕೆಟ್ ಪಂದ್ಯಾವಳಿಯು ವಿವಿ ಕಾಲೇಜಿನ ಕ್ರೀಡಾಂಗಣದಲ್ಲಿ ಇದೇ ಫೆ.18ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ಪ್ರಾಂಶುಪಾಲ ಡಾ.ಉದಯಕುಮಾರ್ ಎಂ.ಎ., ಯುಪಿಎಲ್ ಪಂದ್ಯಾವಳಿಯು ಕಾಲೇಜಿನ ಉಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿರಲಿ ಎಂದು ಶುಭ ಹಾರೈಸಿದರು.

ಪಂದ್ಯವಳಿಯಲ್ಲಿ ಎರಡು ವಿದ್ಯಾರ್ಥಿನಿಯರ ತಂಡ ಸೇರಿದಂತೆ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಯುಸಿಎಂ ವಾರಿಯರ್ಸ್, ಯುಸಿಎಂ ಬ್ರಿಗೇಡ್, ಯುಸಿಎಂ ಜಾಗ್ವಾರ್ಸ್, ಯುಸಿಎಂ ಇಲೆವೆನ್ಸ್, ಯುಸಿಎಂ ಸ್ಟ್ರೈಕರ್ಸ್, ಯುಸಿಎಂ ರಾಯಲ್ಸ್, ಯುಸಿಎಂ ಪಿಂಕ್ ಪ್ಯಾಂಥರ್ಸ್ ಹಾಗೂ ಯುಸಿಎಂ ಬ್ಲೂ ಏಂಜೆಲ್ಸ್ ತಂಡಗಳು ಭಾಗವಹಿಸಲಿವೆ. ಪ್ರತಿಯೊಂದು ತಂಡಕ್ಕೂ ಪ್ರಾಧ್ಯಾಪಕರು ಮಾಲಕರಾಗಿರುತ್ತಾರೆ. ಪ್ರತಿ ಆರು ವಿದ್ಯಾರ್ಥಿ ಗಳ ತಂಡದಲ್ಲೂ ಒಬ್ಬರು ಪ್ರಾಧ್ಯಾಪಕರು ಆಡಲಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಉಪ ನಿರ್ದೇಶಕ ಡಾ.ಕೇಶವಮೂರ್ತಿ, ವಿದ್ಯಾರ್ಥಿ ಸಂಘದ ನಾಯಕ ಸಂಪತ್ ಬಿ. ಮತ್ತು ಕ್ರೀಡಾ ಕಾರ್ಯದರ್ಶಿ ಮನೀಶ್ ಕುಮಾರ್ ಹಾಗೂ ಕಾವ್ಯಾ ಮತ್ತು ತಂಡಗಳ ಮಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News