‘ಮೀನುಗಾರಿಕಾ ಅಭಿವೃದ್ಧಿ ನಿಗಮದ ನೌಕರರಿಗೆ ವೇತನ ಪರಿಷ್ಕರಣೆ’

Update: 2020-02-13 15:41 GMT

ಮಂಗಳೂರು, ಫೆ.13: ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿವೃತ್ತ ನೌಕರರಿಗೆ ಸರಕಾರ ಆದೇಶಿಸಿದ್ದ 6ನೇ ಪರಿಷ್ಕೃತ ವೇತನ ಶ್ರೇಣಿಯನ್ನು 2012ರ ಎಪ್ರಿಲ್ 1ರಿಂದಲೇ ನಿಗಮದ ಆಡಳಿತ ಮಂಡಳಿ ಮಂಜೂರು ಮಾಡಿದೆ ಎಂದು ನಿಗಮದ ಕಾರ್ಮಿಕ ಸಂಘದ ಮಾಜಿನಾಯಕ ಬೆಂಗರೆ ಧನಂಜಯ ಪುತ್ರನ್ ತಿಳಿಸಿದ್ದಾರೆ.

ನಿರಂತರ ಏಳು ವರ್ಷ ಸಂಬಂಧಿಸಿದವರು ಸ್ಪಂದಿಸದಿದ್ದರೂ ಪ್ರಸಕ್ತ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿವೃತ್ತ ನೌಕರರ ಆರ್ಥಿಕ ಸಂಕಷ್ಟವನ್ನು ಮನಗಂಡು ಹೆಚ್ಚಿನ ಕಾಳಜಿ ವಹಿಸಿದ್ದರಿಂದ ವೇತನ ಪರಿಷ್ಕರಣೆ ಆಗಿದೆ. ಮಂಡಳಿಯು 1.5 ಕೋಟಿ ರೂ. ಮಂಜೂರು ಮಾಡಿ ಹಣ ಬಿಡುಗಡೆ ಮಾಡಿದೆ ಎಂದು ಧನಂಜಯ ಪುತ್ರನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News