ದಾಖಲೆ ತಿರುಚಿದ ಆರೋಪ: ಮಾಜಿ ಎನ್ ಆರ್ ಸಿ ಅಧಿಕಾರಿ ಹಜೇಲಾ ವಿರುದ್ಧ ಎಫ್‌ಐಆರ್

Update: 2020-02-13 16:40 GMT
Photo: Facebook/Prateek Hajela

 ಗುವಾಹತಿ, ಪೆ. 13: ಕಳೆದ ವರ್ಷ ಆಗಸ್ಟ್ 31ರಂದು ಪ್ರಕಟವಾದ ಎನ್‌ಆರ್‌ಸಿ ಅಂತಿಮ ಪಟ್ಟಿಗೆ ಸಂಬಂಧಿಸಿದ ದತ್ತಾಂಶ ಹಾಗೂ ದಾಖಲೆಗಳನ್ನು ತಿರುಚಿದ ಆರೋಪದಲ್ಲಿ ಅಸ್ಸಾಂ ಎನ್‌ಆರ್‌ಸಿಯ ಮಾಜಿ ರಾಜ್ಯ ಸಂಯೋಜಕ ಪ್ರತೀಕ್ ಹಜೇಲಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಎನ್‌ಆರ್‌ಸಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿರುವ ಅಸ್ಸಾಂ ಪಬ್ಲಿಕ್ ವರ್ಕ್ಸ್ (ಎಪಿಡಬ್ಲು) ಅಸ್ಸಾಂ ಪೊಲೀಸ್‌ನ ಸಿಐಡಿ ಜೊತೆಗೂಡಿ ಮಂಗಳವಾರ ಪ್ರತೀಕ್ ಹಜೇಲಾ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಭ್ರಷ್ಟಾಚಾರದಲ್ಲಿ ವಿಪ್ರೋ ಸೇರಿದಂತೆ ಪ್ರತೀಕ್ ಹಜೇಲಾ ಹಾಗೂ ಅವರ ಸಹವರ್ತಿಗಳು ಭಾಗಿಯಾಗಿದ್ದಾರೆ. ಅಲ್ಲದೆ ಕೆಲವು ಭ್ರಷ್ಟಾಚಾರವನ್ನು ಲೆಕ್ಕಪತ್ರ ಅಧಿಕಾರಿ ಪತ್ತೆ ಮಾಡಿದ್ದಾರೆ ಎಂದು ಎಪಿಡಬ್ಲು ಮನವಿಯಲ್ಲಿ ಆರೋಪಿಸಿದೆ.

ಪ್ರತೀಕ್ ಹಜೇಲ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಹಾಗೂ ತಮ್ಮ ಅಧಿಕಾರ ದುರುಪಯೋಗಪಡಿಸಿ ಸೈಬರ್ ಅಪರಾಧ ಎಸಗಿದ್ದಾರೆ ಎಂದು ಎಪಿಡಬ್ಲುನ ಅಧ್ಯಕ್ಷ ಅಭಿಜಿತ್ ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News