ಚೀನಾ: ಕೊರೋನ ಸಾವಿನ ಸಂಖ್ಯೆ 1367ಕ್ಕೇರಿಕೆ

Update: 2020-02-13 17:28 GMT

ಬೀಜಿಂಗ್,ಜ.13: ಚೀನಾವನ್ನು ಭಯವಿಹ್ವಲಗೊಳಿಸಿರುವ ಮಾರಣಾಂತಿಕ ಕೊರೋನ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಗುರುವಾರ 1367ಕ್ಕೇರಿದ್ದು, 59,804ಕ್ಕೂ ಅಧಿಕ ಮಂದಿ ಈ ಭೀಕರ ಸೋಂಕಿನಿಂದ ಪೀಡಿತರಾಗಿದ್ದಾರೆ.

  ವಿಶ್ವಸಂಸ್ಥೆಯು ಕೋವಿಡ್-19 ಎಂಬ ಅಧಿಕೃತ ಹೆಸರಿನ ಈ ರೋಗದಿಂದಾಗಿ ಬುಧವಾರ ಹುಬೈ ಪ್ರಾಂತವೊಂದರಲ್ಲೇ 242 ಮಂದಿ ಸಾವನ್ನಪ್ಪಿದ್ದಾರೆಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ತಿಳಿಸಿದ್ದಾರೆಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

 ಹುಬೈ ಸೇರಿದಂತೆ ಚೀನಾದ 31 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ ಹಾಗೂ ಕ್ಸಿನ್‌ ಜಿಯಾಂಗ್‌ ನ ಉತ್ಪಾದನಾ ಹಾಗೂ ಕಟ್ಟಡ ನಿರ್ಮಾಣ ಪಡೆಯ ಸಿಬ್ಬಂದಿಗಳಲ್ಲಿ ಈ ಸೋಂಕು ರೋಗ ಹರಡಿರುವುದಾಗಿ ಅದು ತಿಳಿಸಿದೆ.

ಕೊರೋನ ಸೋಂಕು ಪೀಡಿತರಾಗಿದ್ದು, ಈಗ ಚೇತರಿಸಿಕಂಡಿರುವ 5911 ಮಂದಿ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆಯೆಂದು ವಕ್ತಾರರು ತಿಳಿಸಿದಾರೆ.

ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವೈದ್ಯಕೀಯವಾಗಿ ದೇಹಪರೀಕ್ಷೆಗೊಳಪಟ್ಚ ವ್ಯಕ್ತಿಗಳನ್ನು ಕೂಡಾ ಪಟ್ಟಿಯಲ್ಲಿ ಸೇರ್ಪಡೆ ಗೊಳಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಶಂಕಿತ ಕೊರೋ ನೈರಸ್ ಸೋಂಕಿನ ಪ್ರಕರಣಗಳಲ್ಲಿ ತಪಾಸಣೆಗಾಗಿ ನ್ಯೂಕ್ಲೆರಿಕ್ ಆ್ಯಸಿಡ್ ಪರೀಕ್ಷೆಗಳನ್ನು ಬಳಸುವ ಮೊದಲು ಶ್ವಾಸಕೋಶ ಇಮೇಜಿಂಗ್ ತಂತ್ರಜ್ಞಾನ ಬಳಸಲು ಅಧಿಕಾರಿಗಳಿಗೆ ಅವಕಾಶ ದೊರೆಯಲಿದೆ. ಹೀಗಾಗಿ ರೋಗದ ಹರಡುವಿಕೆಯನ್ನು ಶೀಘ್ರವಾಗಿ ಪತ್ತೆಹಚ್ಚಲು ಸಾಧ್ಯವಾಗಲಿದೆ.

 ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು, ಈ ರೋಗದ ಉಗಮಸ್ಥಾನವೆನ್ನಲಾದ ಹುಬೈ ಪ್ರಾಂತ ಹಾಗೂ ಅದರ ರಾಜಧಾನಿ ವೂಹಾನ್‌ನಲ್ಲಿರುವ ಒಟ್ಟು 5.60 ಕೋಟಿ ಪ್ರಜೆಗಳನ್ನು ಚೀನಾ ಆಡಳಿತ ದಿಗ್ಬಂಧನದಲ್ಲಿರಿಸಿದ್ದು, ಅವರ ಚಲನವಲನಗಳನ್ನು ನಿರ್ಬಂಧಿಸಿದೆ.

ಆದಾಗ್ಯೂ ಕೊರೋನ ವೈರಸ್‌ನ ನೂತನ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಎರಡನೆ ದಿನವೂ ಇಳಿಮುಖವಾಗಿರುವುದು ಅಂಕಿಅಂಶಗಳಿಂದ ದೃಢಪಟ್ಟ ಬಳಿಕ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ನೇತೃತ್ವದಲ್ಲಿ ಆಡಳಿತಾರೂಢ ಪಾಲಿಟ್‌ಬ್ಯೂರೋದ ಸ್ಥಾಯಿ ಸಮಿತಿ ಸಭೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News