ಅತ್ಯಾಚಾರ, ಕೊಲೆ ಯತ್ನ ಪ್ರಕರಣ: ಸಂತ್ರಸ್ತ ವಿದ್ಯಾರ್ಥಿನಿಯರ ಮನೆಗೆ ಡಿವೈಎಫ್‌ಐ ನಿಯೋಗ ಭೇಟಿ

Update: 2020-02-13 17:38 GMT

ಮಂಗಳೂರು, ಫೆ.13: ದುಷ್ಕರ್ಮಿಗಳಿಂದ ಅತ್ಯಾಚಾರ ಯತ್ನಕ್ಕೊಳಗಾಗಿದ್ದ ಮಲಾರಿನ ಮದ್ರಸದ ವಿದ್ಯಾರ್ಥಿನಿಯರ ಮನೆಗೆ ಡಿವೈಎಫ್‌ಐ ಉಳ್ಳಾಲ ವಲಯದ ನಿಯೋಗವು ಗುರುವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.

ಘಟನೆಗೆ ಕಾರಣಕರ್ತರಾದ ಆರೋಪಿಗಳನ್ನು ಪೊಲೀಸ್ ಇಲಾಖೆ ಈಗಾಗಲೇ ಬಂಧಿಸಿದೆ. ಈ ಪ್ರಕರಣದಲ್ಲಿ ಬಾಕಿ ಇರುವ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಬೇಕು. ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆ ಆಮಿಷಗಳಿಗೆ ಒಳಗಾಗದೆ ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್‌ಐ ದಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.

ಡಿವೈಎಫ್‌ಐ ವಲಯ ಅಧ್ಯಕ್ಷರಾದ ಅಶ್ರಫ್ ಕೆ.ಸಿ. ರೋಡ್, ಕಾರ್ಯದರ್ಶಿ ಸುನೀಲ್ ತೇವುಲ, ರಫೀಕ್ ಹರೇಕಳ, ರಝಾಕ್ ಮೊಂಟೆಪದವು, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ವಿಕಾಸ್ ಕುತ್ತಾರ್ , ಡಿವೈಎಫ್‌ಐ ಪಾವೂರು ಅಕ್ಷರ ನಗರ ಘಟಕದ ಮುಖಂಡರಾದ ಸಾಲಿ ಪಾವೂರು, ಮುಬಾರಕ್, ಖಾಲಿದ್ ಪಾವೂರು , ಆಸೀಫ್, ಇಕ್ಬಾಲ್ ಮತ್ತಿತರರಯ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News