ಮಲ್ಪೆ: ಮೀನುಗಾರಿಕೆ ಬಲೆಗೆ ಬಿದ್ದ 5 ಅಡಿ ಉದ್ದದ ಅಪರೂಪದ ಅಕ್ಟೋಪಸ್ !

Update: 2020-02-14 16:49 GMT

ಮಲ್ಪೆ : ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟಿನ ಬಲೆಗೆ ಬೃಹತ್ ಗಾತ್ರದ ಅಪರೂಪದ ಸಮುದ್ರ ಜೀವಿ ಅಕ್ಟೋಪಸ್ ಬಿದ್ದಿದ್ದು, ಮಲ್ಪೆ ಬಂದರಿಗೆ ತರಲಾದ ಅಕ್ಟೋಪಸ್ ಎಲ್ಲರ ಗಮನ ಸೆಳೆದಿದೆ.

ಮಲ್ಪೆಯ ಭಾಗ್ಯಜ್ಯೋತಿ ಆಳಸಮುದ್ರ ಮೀನುಗಾರಿಕೆ ಬೋಟಿಗೆ ದೊರೆತ ಈ ಮೀನು, ಸುಮಾರು 5 ಅಡಿ ಉದ್ದ, 6ಕೆಜಿ ತೂಕ ಭಾರ ಇತ್ತು. ಈ ಮೀನು ಸಮುದ್ರ ತೀರದಲ್ಲಿ ಅಪರೂಪವಾಗಿ ಕಾಣಸಿಗುತ್ತದೆ. ಇದನ್ನು ವೈಜ್ಞಾನಿಕವಾಗಿ ಬಿಗ್ ಬ್ಲೂ ಅಕ್ಟೋಪಸ್ ಹಾಗೂ ಸಾಮಾನ್ಯವಾಗಿ ದೆವ್ವ ಮೀನು(ಡೆವಿಲ್ ಫಿಶ್) ಎಂದು ಕರೆಯಲಾಗುತ್ತದೆ.

ಪ್ರಪಂಚದಲ್ಲಿ ಒಟ್ಟು 200 ಜಾತಿಯ ಅಕ್ಟೋಪಸ್‌ಗಳಿದ್ದು, ಭಾರತದ ಕರಾವಳಿಯಲ್ಲಿ 38 ಜಾತಿಯ ಅಕ್ಟೋಪಸ್‌ಗಳು ದೊರೆಯುತ್ತವೆ. ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾಸಾಗರದ ಕಲ್ಲು ಬಂಡೆಗಳ ಅಡಿಯಲ್ಲಿ ಇವು ಸುಮಾರು 15ರಿಂದ 150 ಮೀಟರ್ ಆಳದಲ್ಲಿ ಹೆಚ್ಚಾಗಿ ವಾಸವಾಗಿ ರುತ್ತದೆ. ಚೀನ, ಸಿಂಗಾಪೂರ್, ಹಾಂಕಾಂಗ್‌ನಲ್ಲಿ ಇದಕ್ಕೆ ಭಾರಿ ಬೇಡಿಕೆ ಇದೆ.

ಅಕ್ಟೋಪಸ್ ಸಂತಾನೋತ್ಪತ್ತಿ ಮಾಡಿದ ನಂತರ ಗಂಡು ಜಾತಿಯ ಮೀನು ತತ್‌ಕ್ಷಣ ಸಾಯುತ್ತದೆ. ಹೆಣ್ಣು ಜಾತಿ ಮೀನು ಮರಿ ಹಾಕಿದ ಬಳಿಕ ಸಾವನ್ನಪ್ಪುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ಕಡಲ ಶಾಸ ವಿಭಾಗದ ಸಹಾಯಕ ಪ್ರೊ.ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News