ಮೀನುಗಾರರ ಬಂಧನ: ಫೆ.15ರಂದು ತಹಶೀಲ್ದಾರ್ ವಿಚಾರಣೆ
Update: 2020-02-14 22:20 IST
ಉಡುಪಿ, ಫೆ.14: ಮಹಾರಾಷ್ಟ್ರದ ಮಲ್ವಾನ್ ಪ್ರದೇಶದಲ್ಲಿ ಬಂಧನಕ್ಕೆ ಒಳ ಗಾದ ಮಲ್ಪೆಯ ಶ್ರೀಲಕ್ಷ್ಮೀ ಮೀನುಗಾರಿಕೆ ಬೋಟಿನ ಏಳು ಮಂದಿ ಮೀನು ಗಾರರನ್ನು ವಿಚಾರಣೆ ಹಿನ್ನೆಲೆಯಲ್ಲಿ ಫೆ.15ರಂದು ಸಿಂಧುದುರ್ಗದ ತಹಶೀಲ್ದಾರ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಕುರಿತು ತಹಶೀಲ್ದಾರ್ ವಿಚಾರಣೆ ನಡೆಸಿ, ದಂಡದ ಮೊತ್ತವನ್ನು ನಿಗದಿ ಪಡಿಸಬಹುದು. ಅದರ ನಂತರವೇ ದಂಡ ಪಾವತಿಸಿ, ಬೋಟು ಹಾಗೂ ಏಳು ಮಂದಿ ಮೀನುಗಾರರನ್ನು ಬಿಡುಗಡೆ ಮಾಡಬಹುದಾಗಿದೆ ಎಂದು ಸಿಂಧುದುರ್ಗ ಜಿಲ್ಲೆಯ ದೇವಗಡದಲ್ಲಿರುವ ಬೋಟಿನ ಮಾಲಕ ಕುಂದಾಪುರದ ಅಂಕಿತ್ ಶೆಟ್ಟಿ ತಿಳಿಸಿದ್ದಾರೆ.