ರಕ್ತದಾನ ಮಾಡಿ: ಬಿರಿಯಾನಿ ತಿನ್ನಿ
ಮಂಗಳೂರು, ಫೆ.14: ನಗರದ ಲೈಟ್‌ಹೌಸ್ ಹಿಲ್ ರಸ್ತೆಯ ನಲಪ್ಪಾಡ್ ರೆಸಿಡೆನ್ಸಿಯಲ್ಲಿರುವ ‘ಊಟದ ಮನೆ’ಯಲ್ಲಿ ಉಚಿತ ಬಿರಿಯಾನಿ ತಿನ್ನುವ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಅದಕ್ಕೊಂದು ಷರತ್ತು ವಿಧಿಸಲಾಗಿದೆ. ಅಂದರೆ ‘ಊಟದ ಮನೆ’ಯ ಮುಂದಿರುವ ಕೆಎಂಸಿ ಆಸ್ಪತ್ರೆಯಲ್ಲಿ ದಾನಿಗಳು ಬೆಳಗ್ಗೆ 8:30ರಿಂದ ಸಂಜೆ 5:30ರವರೆಗೆ ರಕ್ತದಾನ ಮಾಡಬಹುದು. ಹೀಗೆ ರಕ್ತದಾನ ಮಾಡಿದವರಿಗೆ ಒಂದು ಕೂಪನ್ ನೀಡಲಾಗುತ್ತದೆ. ಆ ಕೂಪನ್ ತೋರಿಸಿದರೆ ‘ಊಟದ ಮನೆ’ಯಲ್ಲಿ ಬಿರಿಯಾನಿ ಸವಿಯಬಹುದಾಗಿದೆ. ಫೆ.12ರಿಂದ ಆರಂಭಗೊಂಡಿರುವ ಈ ವಿಶೇಷ ಯೋಜನೆಯು ಫೆ.20ರವರೆಗೆ ಮುಂದುವರಿಯಲಿದೆ.
ರಕ್ತದಾನದಿಂದ ಮಾನವ ಜೀವ ಉಳಿಸಿಕೊಳ್ಳುವ ಸಲುವಾಗಿ ಆಯೋಜಿಸಲಾಗಿರುವ ಈ ಶಿಬಿರದ ಮೂಲಕ ‘ಊಟದ ಮನೆ’ಯ ಶುಚಿ-ರುಚಿಯಾದ ಭಟ್ಕಳ ದಮ್ ಬಿರಿಯಾನಿ, ಸೇಮಿಗೆ ಬಿರಿಯಾನಿ, ಸೀಫುಡ್, ಟಿಕ್ಕ, ತಂದೂರಿ ಮತ್ತು ಚೈನೀಸ್ ಆಹಾರಗಳನ್ನು ಪರಿಚಯಿಸುವ ಪ್ರಯತ್ನವನ್ನೂ ಸಂಘಟಕರು ಮಾಡಿದ್ದಾರೆ. ಕುಟುಂಬ ಸಮೇತರಾಗಿ ಇಲ್ಲಿ ಬಗೆ ಬಗೆಯ ಖಾದ್ಯಗಳನ್ನು ಕೂಡ ಸವಿಯಬಹುದಾಗಿದೆ.