×
Ad

ಫೆ. 23: ಅಬ್ಬಕ್ಕ ಉತ್ಸವ- ಕ್ರೀಡಾ ಪಂದ್ಯಾಟ

Update: 2020-02-14 23:22 IST

ಮಂಗಳೂರು, ಫೆ.14: ಪ್ರಸಕ್ತ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತ, ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಫೆ.23ರಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ತಾಲೂಕಿನ ಅಸೈಗೋಳಿ ಕೇಂದ್ರ ಮೈದಾನದಲ್ಲಿ ವಿವಿಧ ಕ್ರೀಡಾ ಪಂದ್ಯಾವಳಿ ನಡೆಯಲಿವೆ.

ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಫೆ.21ರ ಒಳಗಾಗಿ ವಿನೋದ್ ಕುಮಾರ್ (9845026869), ಲೋಕನಾಥ ರೈ (944800007) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

ಬಹುಮಾನ: ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ- 12,000 ರೂ., ದ್ವಿತೀಯ- 8,000 ರೂ., ತೃತೀಯ- 4,000 ರೂ., ಚತುರ್ಥ- 2,000 ರೂ. ನಗದು ಬಹುಮಾನ ನೀಡಲಾಗುತ್ತದೆ.  ತ್ರೋಬಾಲ್: ಮಹಿಳೆಯರ ವಿಭಾಗದಲ್ಲಿ ಪ್ರಥಮ- 8,000 ರೂ., ದ್ವಿತೀಯ 6,000 ರೂ., ತೃತೀಯ 4,000 ರೂ., ಚತುರ್ಥ- 2,000 ರೂ. ನಗದು ಬಹುಮಾನವಿದೆ. ಹಗ್ಗ ಜಗ್ಗಾಟ: ಪುರುಷರ ವಿಭಾಗದಲ್ಲಿ ಪ್ರಥಮ- 10,000 ರೂ., ದ್ವಿತೀಯ- 7,000 ರೂ., ತೃತೀಯ- 4,000 ರೂ., ಚತುರ್ಥ- 2,000 ರೂ. ನಗದು ಬಹುಮಾನ ವಿತರಿಸಲಾಗುವುದು. ಹಗ್ಗ ಜಗ್ಗಾಟ: ಮಹಿಳೆಯರು ವಿಭಾಗದಲ್ಲಿ ಪ್ರಥಮ- 8,000 ರೂ., ದ್ವಿತೀಯ- 6,000 ರೂ., ತೃತೀಯ- 4,000 ರೂ., ಚತುರ್ಥ- 2,000 ರೂ. ನಗದು ಬಹುಮಾನ ನೀಡಲಾಗುತ್ತದೆ.

ಭಾಗವಹಿಸುವ ತಂಡಗಳು ಫೆ.23ರಂದು ಬೆಳಗ್ಗೆ 9 ಗಂಟೆಯೊಳಗೆ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಹಾಜರಿರಬೇಕು ಎಂದು ಯುವ ಸಬಲೀಕರಣ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News