ಶ್ರೀನಿವಾಸ, ಜಯಲಕ್ಷ್ಮಿಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ

Update: 2020-02-14 17:54 GMT

ಸುರತ್ಕಲ್, ಫೆ. 14 : ಮುಕ್ಕ ಶ್ರೀನಿವಾಸ ವಿಶ್ವವಿದ್ಯಾನಿಲಯ, ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳು ಮತ್ತು ಜಯಲಕ್ಷ್ಮಿ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವು ಶುಕ್ರವಾರ ವಿವಿ ಕ್ಯಾಂಪಸ್‌ನಲ್ಲಿ ನಡೆಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ರಾಜ್ಯ ಬಜೆಟ್‌ನಲ್ಲಿ ಅವಿಭಜಿತ ದ.ಕ. ಜಿಲ್ಲೆಗೆ ಅಭಿವೃದ್ಧಿಗೆ ಸಂಬಂಧಿಸಿ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದರು.

ಸರಕಾರಗಳು ಮಾಡುವ ಅತ್ಯತ್ತಮ ಕೆಲಸಗಳನ್ನು ಶ್ರಿನಿವಾಸ ವಿವಿ ಕುಲಾಧಿಪತಿ ಸಿಎ ಎ. ರಾಘವೇಂದ್ರ ರಾವ್ ಮಾಡುತ್ತಿರುವುದು ಅಭಿನಂದ ನಾರ್ಹ ಎಂದ ಕೋಟ ಶ್ರೀನಿವಾಸ ಪೂಜಾರಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿ ದ.ಕ.ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಅವು ಗಳನ್ನು ವ್ಯವಸ್ಥಿತವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಭಾಯಿಸಿಕೊಂಡು ಹೋಗುತ್ತಿವೆ ಎಂದರು.

ದ.ಕ.ಜಿಪಂ ಸಿಇಒ ಡಾ.ಸೆಲ್ವಮಣಿ ಆರ್. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಶೀನಿವಾಸ ವಿವಿ ಕುಲಾಧಿಪತಿ ಸಿಎ ಎ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಮನೆಮಕ್ಕಳಂತೆ ನೋಡಿಕೊಳ್ಳಬೇಕು. ಉದ್ಯೋಗವಕಾಶವು ವಿದ್ಯಾರ್ಥಿಗಳನ್ನು ಅರಸಿಕೊಂಡು ಬರಬೇಕು ಎನ್ನುವ ಉದ್ದೇಶದಿಂದ ಕೊಟ್ಯಂತರ ರೂ. ವೆಚ್ಚದಲ್ಲಿ ಕೌಶಲ್ಯಾಭಿವೃದ್ಧಿ ಪ್ರಯೋಗ ಶಾಲೆಗಳನ್ನು ಶ್ರೀನಿವಾಸ ವಿವಿಯಲ್ಲಿ ಸ್ಥಾಪಿಸಲಾಗುವುದು. ಪ್ರಸಕ್ತ ವರ್ಷದಲ್ಲಿ ದೇಶದ 50 ಪ್ರಖ್ಯಾತ ವಿವಿಯೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. ಆ ಮೂಲಕ ಶ್ರೀನಿವಾಸ ವಿವಿಯು ರಾಷ್ಟ್ರದಲ್ಲಿಯೇ ಮಾದರಿ ವಿವಿಯಾಗಿ ರೂಪುಗೊಳ್ಳಬೇಕು ಎನ್ನುವುದು ನನ್ನ ಕನಸು ಹಾಗೂ ಆಶಯವಾಗಿದೆ ಎಂದರು.

ವೇದಿಕೆಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಹಾಗೂ ಸಹ ಕುಲಾಧಿಪತಿ ಡಾ.ಎ. ಶ್ರೀನಿವಾಸ್ ರಾವ್, ಶ್ರಿನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಜಯಲಕ್ಷ್ಮಿಆರ್. ರಾವ್, ಪ್ರತಿಷ್ಠಾನದ ಕಾರ್ಯದರ್ಶಿ ಮಿತ್ರಾ ಎಸ್. ರಾವ್, ಕುಲಪತಿ ಡಾ.ಪಿ.ಎಸ್. ಐತಾಳ್, ಕುಲಸಚಿವ ಡಾ. ಅನಿಲ್ ಕುಮಾರ್, ಕುಲಸಚಿವ (ಮೌಲ್ಯಮಾಪನ) ಡಾ.ಶ್ರೀನಿವಾಸ್ ಮಯ್ಯ ಡಿ., ಕುಲಸಚಿವ (ಅಭಿವೃದ್ಧಿ) ಡಾ. ಅಜಯ್, ಸಂಸ್ಥಾಪಕರ ದಿನಾಚರಣೆಯ ಸಂಯೋಜಕ ಡಾ. ಮನೋಜ್ ವರ್ಮ, ಮೆಘನಾ ಎಸ್. ರಾವ್ ಉಪಸ್ಥಿತರಿದ್ದರು.

ಎ. ಶಾಮರಾವ್ ಪ್ರತಿಷ್ಠಾನವು ಅವಿಭಜಿತ ದ.ಕ. ಜಿಲ್ಲೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ನೀಡುವ ಎ. ಶಾಮರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡುಬಿದ್ರೆಯ ಗಣಪತಿ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ಡಾ. ರಾಘವೇಂದ್ರ ರಾವ್ ಮತ್ತು ವಾಮಂಜೂರಿನ ಎಸ್.ಡಿ.ಎಂ. ಮಂಗಳ ಜ್ಯೋತಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಕಸ್ತೂರಿ, ಅತ್ಯುನ್ನತ ಸಾಮಾಜಿಕ ಸೇವೆಗೆ ನೀಡಲ್ಪಡುವ ಎ. ಶಾಮರಾವ್ ಸ್ಮಾರಕ ಪ್ರಶಸ್ತಿಯನ್ನು ಸುಳ್ಯ ತಾಲೂಕಿನ ಸೇತು ಬಂಧು, ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ‘ಪದ್ಮಶ್ರೀ’ ಪುರಸ್ಕೃತ ಡಾ. ಗಿರೀಶ್ ಭಾರಧ್ವಜ್‌ಗೆ ನೀಡಿ ಗೌರವಿಸಲಾಯಿತು.

ಡಾಕ್ಟರೇಟ್ ಪದವೀಧರರಿಗೆ, ರ್ಯಾಂಕ್ ವಿಜೇತರಿಗೆ ಹಾಗೂ ಸಂಶೋಧನ ನಿರತ ಉಪನ್ಯಾಸಕರಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News