ಬೋಳಿಯಾರ್ : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನಾ ಸಭೆ

Update: 2020-02-14 18:06 GMT

ಕೊಣಾಜೆ : ಮೋದಿ ಆಡಳಿತದಲ್ಲಿ ದೇಶದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಬಿಜೆಪಿ ಸೋಲುತ್ತಿದೆ. ಆಡಳಿತ ವಿರೋಧಿ ಅಲೆಯನ್ನು ಮರೆಮಾಚುವುದಕ್ಕಾಗಿ ಎನ್ ಆರ್ ಸಿ ಯಂತಹ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ ಅಂಬೇಡ್ಕರ್ ವಾದ ಮತ್ತು ಮನುವಾದದ ಸಂಘರ್ಷ ನಡೆಯುತ್ತಿದೆ ಎಂಬುದನ್ನು‌ ನಾವು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಕಾಂಗ್ರೆಸ್ ಮುಖಂಡ‌ ಉಗ್ರಪ್ಪ‌ ಹೇಳಿದರು.

ಅವರು ಬೋಳಿಯಾರ್ ನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ  ವಿರುದ್ಧ ಶುಕ್ರವಾರ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರಿನ, ಕರಾವಳಿಯ ಜನ ಅತ್ಯಂತ ಬುದ್ದಿವಂತ ಜನ.  ಮತೀಯವಾದ ಬಿಜೆಪಿ, ಆರ್ ಎಸ್ ಎಸ್ ಗೆ‌ ಬೆಲೆ ಕೊಟ್ಟು‌ ಆಯ್ಕೆ ಮಾಡಿದ್ದೀರಿ ಕರಾವಳಿಯ ಜನರ ಬೇಡಿಕೆಗೆ‌ ಸ್ಪಂದಿಸುತ್ತಿಲ್ಲ.  ಇಲ್ಲಿಯ ಎಂಪಿ ಒಂದೇ ಒಂದು ದಿನ ಇಲ್ಲಿಯ ಸಮಸ್ಯೆಯ ಬಗ್ಗೆ ಚಕಾರ ಎತ್ತಿಲ್ಲ. ಅವರೊಬ್ಬ ಜೋಕರ್ ಇದ್ದ ಹಾಗೆ ಎಂದು ವ್ಯಂಗ್ಯವಾಡಿದರು.

ದಲಿತ ಮುಖಂಡರಾದ ಬಿ.ಆರ್.ಬಾಸ್ಕರ ಪ್ರಸಾದ್ ಅವರು ಮಾತನಾಡಿ, ಈ ಕಾಯ್ದೆ ವಿರುದ್ಧ ನಾವೆಲ್ಲರೂ ಒಟ್ಟಾದರೆ ಖಂಡಿತಾ ಈ ಕಾಯ್ದೆ ಜಾರಿ ಸಾದ್ಯವಿಲ್ಲ ಎಂದರು.

 ಶಾಸಕ ಯು.ಟಿ.ಖಾದರ್, ಜನಾತದಳ ಮುಖಂಡ  ಎಂ.ಬಿ.ಸದಾಶಿವ, ಚೇಳೂರು ಚರ್ಚ್ ನ ಧರ್ಮಗುರು ಫಾದರ್ ಲಾರನ್ಸ್, ಮುಲ್ಕಿ‌ ಜುಮಾ ಮಸೀದಿಯ ಎಸ್ ಬಿ ದಾರಿಮಿ ಮಾತನಾಡಿದರು. ಬೋಳಿಯಾರ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು. ಬೋಳಿಯಾರ್ ಸಂರಕ್ಷಣಾ ಸಮಿತಿಯ ಸಂಚಾಲಕರಾದ ಹಾಜಿ ಅಬ್ದುಲ್ ಲತೀಫ್ ಅಧ್ಯಕ್ಷತೆ ವಹಿಸಿದ್ದರು.

ಅಮ್ಮೆಂಬಳ ಜಾರದಗುಡ್ಡೆ ಆಮೀರ್ ತಂಙಳ್ ದುವಾ ನೆರವೇರಿಸಿದರು. ಎಸ್ ಡಿಪಿಐ ಕಾರ್ಯದರ್ಶಿ ಅಶ್ರಫ್ ಮಾಚಾರ್, ಎಸ್ ಎಸ್ ಎಫ್ ಉಪಾಧ್ಯಕ್ಷ ಸುಫ್ಯಾನ್ ಸಖಾಫಿ, ಉದ್ಯಮಿ ಶಾಫಿ ಹಾಜಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಮುಖಂಡ ಇಬ್ರಾಹಿಂ ಖಲೀಲ್ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು. ನೌಫಲ್ ಕೆ.ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News