ದೇಶದ ಪ್ರತಿ ಮಗುವಿನ ಮೇಲೆ 27ಸಾವಿರ ರೂ. ಅಧಿಕ ಸರಕಾರದ ಸಾಲದ ಹೊರೆ: ಉಗ್ರಪ್ಪ

Update: 2020-02-14 18:14 GMT

ಮಂಗಳೂರು : ಈ ದೇಶದಲ್ಲಿ ಹುಟ್ಟಿದ ಮಗುವಿನ ತಲೆಯ ಮೇಲೂ 27,200 ರೂ. ಸಾಲದ ಹೊರೆ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದಾಗಿದೆ ಎಂದು ಮಾಜಿ ಸಂಸದ ಉಗ್ರಪ್ಪ ಟೀಕಿಸಿದ್ದಾರೆ.

ದೇಶದಲ್ಲಿ 2014ರಲ್ಲಿ ಸಾಲದ ಹೊರೆ 53.11ಲಕ್ಷ ಕೋಟಿ ರೂ .ಇತ್ತು . 2019ರಲ್ಲಿ ಈ ಸಾಲದ ಮೊತ್ತ 91.01 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದರಿಂದ ಪ್ರತಿಯೊಬ್ಬನ ತಲೆಯ ಮೇಲೂ 27,200 ರೂ.ಗೂ ಅಧಿಕ ಸಲದ ಹೊರೆ ಇದೆ. ದೇಶದ ಜಿಡಿಪಿ ಶೇ.3.5 ಕ್ಕೆ ಕುಸಿದಿದೆ. ಹಸಿವಿನಿಂದ ನರಳುತ್ತಿರುವ ಜನರಿರುವ ಜಗತ್ತಿನ 127 ದೇಶಗಳ ಪೈಕಿ ಭಾರತ 103ನೆ ಸ್ಥಾನದಲ್ಲಿದೆ. ಭಾರತದ ಸ್ಥಾನ ಬಾಂಗ್ಲಾ, ಶ್ರೀಲಂಕಾ ದೇಶ ಗಳಿಗಿಂತಲೂ ಹಿಂದಿದೆ. ಕರ್ನಾಟಕದಲ್ಲಿ ಅನ್ನ ಭಾಗ್ಯ ಇಲ್ಲದೆ ಇರುತ್ತಿದ್ದರೆ ಈ ಭಾರತದ ಸ್ಥಾನ 105ಕ್ಕೆ ತಲುಪುವ ಸಾಧ್ಯತೆ ಇತ್ತು ಎಂದು ಉಗ್ರಪ್ಪ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಯು.ಟಿ.ಖಾದರ್, ಮಂಗಳೂರು ತಾ. ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಸದಾಸಿವ ಉಳ್ಳಾಲ,ಟಿ.ಕೆ.ಸುಧೀರ್, ಕರೀಂ, ಸಂತೋಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News