4ನೇ ಸ್ಥಾನಕ್ಕೇರಿದ ಸ್ಮತಿ ಮಂಧಾನ

Update: 2020-02-14 18:40 GMT

ದುಬೈ, ಫೆ.14:ಭಾರತದ ಸ್ಟಾರ್ ಆಟಗಾರ್ತಿ ಸ್ಮತಿ ಮಂಧಾನ ಐಸಿಸಿ ಮಹಿಳಾ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಮೂರು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನ ತಲುಪಿದ್ದಾರೆ. ಜೆಮಿಮಾ ರೋಡ್ರಿಗಸ್ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

 ಬೌಲರ್‌ಗಳ ಪೈಕಿ ಪೂನಂ ಯಾದವ್ ಆರು ಸ್ಥಾನ ಕೆಳಗೆ ಜಾರಿ ಅಗ್ರ-10ರಿಂದ ಹೊರಗುಳಿದು 12ನೇ ಸ್ಥಾನಕ್ಕೆ ಕುಸಿದರು.

ನ್ಯೂಝಿಲ್ಯಾಂಡ್‌ನ ಸುಝಿ ಬೇಟ್ಸ್ ಅಗ್ರ ಸ್ಥಾನ ಉಳಿಸಿಕೊಂಡರು. ನಾಲ್ಕು ಸ್ಥಾನ ಮೇಲಕ್ಕೇರಿದ ಬೇಟ್ಸ್ ಸಹ ಆಟಗಾರ್ತಿ ಹಾಗೂ ನಾಯಕಿ ಸೋಫಿ ಡಿವೈನ್ ದ್ವಿತೀಯ ಸ್ಥಾನಕ್ಕೇರಿದರು ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

 ಆಸ್ಟ್ರೇಲಿಯದ ಬೆಥ್ ಮೂನಿ ಹಾಗೂ ಮಂಧಾನ ಇಬ್ಬರೂ ತ್ರಿಕೋನ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ್ದು, ಇಬ್ಬರೂ ರ್ಯಾಂಕಿಂಗ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮೆಗ್ ಲ್ಯಾನಿಂಗ್ ಮೂರು ಸ್ಥಾನ ಕೆಳಗೆ ಜಾರಿದ ಹೊರತಾಗಿಯೂ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ.

ಬೌಲರ್‌ಗಳ ಪೈಕಿ ಎಲ್ಲಿಸ್ ಪೆರ್ರಿ ತನ್ನ ಚಿನ್ನದ ಓಟ ಮುಂದುವರಿಸಿದ್ದು, ನಾಲ್ಕು ಸ್ಥಾನ ಜಿಗಿದು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ವೇಗದ ಬೌಲರ್ ಅನಿಯಾ ಶ್ರುಬ್‌ಸೋಲೆ ಆರು ಸ್ಥಾನ ಕುಸಿತ ಕಂಡು ಅಗ್ರ-20ರಲ್ಲಿ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ಗಳ ಪೈಕಿ ಡಿವೈನ್ ಅಗ್ರಸ್ಥಾನ ಪಡೆದಿದ್ದಾರೆ. ನ್ಯಾಟ್ ಸಿವೆರ್ ಒಂದು ಸ್ಥಾನ ಮೇಲಕ್ಕೇರಿ ಅಗ್ರ-3ರಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News