ಕಾಜೂರು ಉರೂಸ್: ದ್ಸಿಕ್ರ್ ಹಲ್ಕಾ ಕಾರ್ಯಕ್ರಮ

Update: 2020-02-15 07:14 GMT

ಬೆಳ್ತಂಗಡಿ, ಫೆ.15:  ಪ್ರಸಿದ್ಧ ಧಾರ್ಮಿಕ ಸಾಮಾಜಿಕ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ ಉರೂಸ್ ನ ಏಳನೇ ದಿನದ ಕಾರ್ಯಕ್ರಮದ ಅಂಗವಾಗಿ ದ್ಸಿಕ್ರ್ ಹಲ್ಕಾ ಫೆ.13ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆ ಮತ್ತು ದ್ಸಿಕ್ರ್ ಹಲ್ಕಾದ ನೇತೃತ್ವವನ್ನು ಸೈಯದ್ ಕಾಜೂರು ತಂಙಳ್ ವಹಿಸಿದ್ದರು.

ಅಬೂಬಕರ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ ಉದ್ಘಾಟನೆ ನೆರವೇರಿಸಿದರು.

ಸಮಾರಂಭದಲ್ಲಿ ಮುರ ತಂಙಳ್, ವಾದಿ ಇರ್ಫಾನ್ ತಂಙಳ್, ಇಸ್ಮಾಯೀಲ್ ತಂಙಳ್, ಬಿಲಾಲ್ ತಂಙಳ್, ಸೈಯದ್ ತುರಾಬ್ ತಂಙಳ್, ಗುಲ್ ರೇಝ್ ಅಹ್ಮದ್ ರಝ್ವಿ ಬೆಳ್ತಂಗಡಿ, ಹಾಫಿಝ್ ಅಲ್ಲಾಮಾ ಮೌಲಾನಾ ನಾಸಿರ್ ಹುಸೈನ್ ರಝ್ವಿ, ಅಬ್ಬೋನು ಮದ್ದಡ್ಕ, ಯು.ಎಸ್.ಅಬೂಬಕರ್ ಉಳ್ಳಾಲ, ನಝೀರ್ ಮಠ, ಕಾಜೂರು ಮುದರ್ರಿಸ್ ವಿ.ಎಂ.ಅಬೂಬಕ್ಕರ್ ಸಖಾಫಿ ಮುಖ್ಯ ಅತಿಥಿಗಳಾಗಿದ್ದರು.

ಮಸೂದ್ ಸಅದಿ ಪದ್ಮುಂಜ ನೇತೃತ್ವದಲ್ಲಿ ಬುರ್ದಾ ಆಲಾಪನೆ ಪಡೆಯಿತು.

ಉರೂಸ್ ಸಮಿತಿಯ ಉಪಾಧ್ಯಕ್ಷ ಕೆ‌ ಮುಹಮ್ಮದ್ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕರ್ ಸಿದ್ದೀಕ್, ಕಾರ್ಯದರ್ಶಿ ಕಾಸಿಂ ಮಲ್ಲಿಗೆಮನೆ, ಕೋಶಾಧಿಕಾರಿ ಕೆ.ಎಂ.ಕಮಾಲ್ ಕಾಜೂರು, ಪ್ರಮುಖರಾದ ಕೆ.ಯು.ಮುಹಮ್ಮದ್, ಬಿ.ಎ.ಯೂಸುಫ್ ಶರೀಫ್, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕಿಲ್ಲೂರು, ಬದ್ರುದ್ದೀನ್‌ ಕಾಜೂರು, ಅಬ್ದುಲ್‌ ರಹಿಮಾನ್ ಕಟ್ಟೆಚಾವಡಿ, ಉಮರ್ ಸಖಾಫಿ, ಅಬೂಬಕರ್ ಮಲ್ಲಿಗೆ, ಕೆ.ಶೇಕಬ್ಬ ಕುಕ್ಕಾವು, ಮುಹಮ್ಮದ್ ರಫಿ, ವಿ.ಮುಹಮ್ಮದ್, ಮುಹಮ್ಮದ್ ಸಖಾಫಿ, ಎಚ್.‌ಎನ್.ಹನೀಫ್, ಬಿ.ಎಚ್.ಹಮೀದ್ ಕಿಲ್ಲೂರು ಮತ್ತಿತರರು ಉಪಸ್ಥಿತರಿದ್ದರು.

ಉರೂಸ್ ಕಮಿಟಿಯ ಅಧ್ಯಕ್ಷ ಕೆ.ಯು.ಇಬ್ರಾಹೀಂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News