ಮಂಗಳೂರು: ಕೇಂದ್ರ ಬಜೆಟ್ ಕುರಿತು ವಿಶ್ಲೇಷಣಾ ಸಭೆ

Update: 2020-02-15 18:22 GMT

ಮಂಗಳೂರು ಫೆ.15: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆ ಆಶ್ರಯದಲ್ಲಿ ಸಂಸ್ಥೆಯ ಸಮಾಜಸೇವಾ ಯೋಜನೆಯ ಅಂಗವಾಗಿ ಕೇಂದ್ರದ ಬಜೆಟ್ ಕುರಿತು ವಿಶ್ಲೇಷಣಾ ಸಭೆಯು ಶುಕ್ರವಾರ ರೋ.ಜಯಪ್ರಕಾಶ್ ಪೂಂಜಾ ಅವರ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜರುಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಭಾರತೀಯ ಲೆಕ್ಕ ಪರಿಶೋಧಕರ ಸಂಘದ ದ.ಕ. ಜಿಲ್ಲಾ ಶಾಖೆಯ ಮಾಜಿ ಅಧ್ಯಕ್ಷ ಹಾಗೂ ಲೆಕ್ಕ ಪರಿಶೋಧಕ ನಿತಿನ್ ಶೆಟ್ಟಿ ಪ್ರಸ್ತುತ ಆರ್ಥಿಕ ಸಾಲಿನ ಮುಂಗಡ ಪತ್ರದ ಸಾಧಕ ಬಾಧಕದ ಬಗ್ಗೆ ಮಾಹಿತಿ ನೀಡಿದರು. ಪೆಟ್ರೋಲ್, ಡಿಸೆಲ್‌ಗೆ ಹೆಚ್ಚಿನ ತೆರಿಗೆ ವಿಧಿಸಿದ ಪರಿಣಾಮ ಕೈಗಾರಿಕಾ ಉದ್ಯಮದ ದೈನಂದಿನ ಗ್ರಾಹಕರ ಸಾಮಾಗ್ರಿ, ಉತ್ಪನ್ನಗಳಿಗೆ ಬೆಲೆ ಏರಿಕೆ ಆಗಲಿದೆ ಎಂದರು.

ಈ ಸಂದರ್ಭ ಸಂಸ್ಥೆಯ ಸಾಪ್ತಾಹಿಕ ಪತ್ರಿಕೆ ‘ಸೆಂಟೊರ್’ ಬಿಡುಗಡೆಗೊಳಿಸಲಾಯಿತು. ಕಾರ್ಯದರ್ಶಿ ರೋ. ಕೆ.ಎಂ. ಹೆಗ್ಡೆ ವರದಿ ವಾಚಿಸಿದರು. ರೋ. ಜೋಯೆಲ್ ಲೋಬೋ ಸ್ವಾಗತಿಸಿದರು,.ರೋ. ರವಿ ಜಲಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News