​ಫೆ.16: ಎಸ್‌ಒಟಿಸಿಯಿಂದ ಹಾಲಿಡೇ ಬಝಾರ್

Update: 2020-02-15 18:25 GMT

ಮಂಗಳೂರು, ಫೆ.15: ಪ್ರತಿಷ್ಠಿತ ಟೂರಿಸ್ಟ್ ಸಂಸ್ಥೆಯಾದ ‘ಎಸ್‌ಒಟಿಸಿ’ ವತಿಯಿಂದ ನಗರದ ಫಳ್ನೀರ್ ರಸ್ತೆಯ ಮೋತಿ ಮಹಲ್ ಹೊಟೇಲ್‌ನಲ್ಲಿ ಫೆ.16ರಂದು ಬೆಳಗ್ಗೆ 9:30ರಿಂದ ಸಂಜೆ 6:30ರವರೆಗೆ ಹಾಲಿಡೇ ಬಝಾರ್ ಕಾರ್ಯಕ್ರಮ ನಡೆಯಲಿದೆ.

ಕೇವಲ 1.05 ಲಕ್ಷ ರೂ.ನಲ್ಲಿ ಯುರೋಪ್ ಪ್ರವಾಸದ ವಿಶೇಷ ಪ್ಯಾಕೇಜ್ ಇದ್ದು, 1.39 ಲಕ್ಷ ರೂ.ನಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವ ವಿಶೇಷ ಪ್ಯಾಕೇಜ್‌ಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಮೊದಲೇ ಕೂಪನ್ ಪಡೆಯುವ ಮೂಲಕ ನಾಲ್ಕು ದಿನಗಳ ಕಾಲ ಉಚಿತವಾಗಿ ಅಂತರಾಷ್ಟ್ರೀಯ ಪ್ರವಾಸ ಕೈಗೊಳ್ಳುವ ಅವಕಾಶವಿದೆ. ಅಲ್ಲದೆ, ಇನ್ನು ಹತ್ತು-ಹಲವು ವಿಶೇಷ ಆಫರ್‌ಗಳನ್ನು ನಿಮ್ಮದಾಗಿಸಿಕೊಳ್ಳಲು ಫೆ.16ರಂದು ಮೋತಿ ಮಹಲ್‌ಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ sotc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News