ಜಮ್ಮು-ಕಾಶ್ಮೀರದಲ್ಲಿ 2ಜಿ ಮೊಬೈಲ್ ಡಾಟಾ ಸೇವೆ ಫೆ.24ರವರೆಗೆ ವಿಸ್ತರಣೆ

Update: 2020-02-16 16:12 GMT

ಜಮ್ಮು,ಫೆ.16: ಜಮ್ಮು-ಕಾಶ್ಮೀರ ಆಡಳಿತವು 2ಜಿ ಮೊಬೈಲ್ ಡಾಟಾ ಸೇವೆಯನ್ನು ಫೆ.24ರವರೆಗೆ ವಿಸ್ತರಿಸಿ ರವಿವಾರ ಆದೇಶಿಸಿದೆ. ಸ್ಥಿರ ದೂರವಾಣಿ ಅಂತರ್ಜಾಲ ಸಂಪರ್ಕಕ್ಕೂ ಈ ವಿಸ್ತರಣೆ ಅನ್ವಯವಾಗಲಿದೆ.

ವೈಟ್ ಲಿಸ್ಟ್‌ನಲ್ಲಿ ಉಲ್ಲೇಖಿಸಲಾಗಿರುವ 1,485 ಅಂತರ್ಜಾಲ ತಾಣಗಳು ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳುವಂತೆ ಇಂಟರ್ನೆಟ್ ಸೇವಾ ಸಂಸ್ಥೆಗಳಿಗೆ ತಾಕೀತು ಮಾಡಲಾಗಿದೆ. ಜೊತೆಗೆ, ಪಿಯರ್-ಟು-ಪಿಯರ್ ಸಂಪರ್ಕಗಳು ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್(ವಿಪಿಎನ್) ಅಪ್ಲಿಕೇಷನ್‌ಗಳಿಗೆ ಅವಕಾಶ ನೀಡುವ ಯಾವುದೇ ಸಾಮಾಜಿಕ ಜಾಲತಾಣವನ್ನು ಬಳಕೆದಾರರಿಗೆ ಲಭ್ಯವಾಗಿಸದಂತೆಯೂ ನಿರ್ದೇಶ ನೀಡಲಾಗಿದೆ.

ಕೇಂದ್ರವು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಿದ್ದ ಕಳೆದ ವರ್ಷದ ಆ.5ರಿಂದ ಸ್ಥಗಿತಗೊಂಡಿದ್ದ ಇಂಟರ್ನೆಟ್ ಸೇವೆಯನ್ನು ಸ್ಥಿರ ದೂರವಾಣಿಗಳಿಗೆ ಜ.14ರಂದು ಮತ್ತು ಮೊಬೈಲ್ ಡಾಟಾ ಸೇವೆಯನ್ನು ಜ.25ರಂದು ಪುನರಾರಂಭಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News