ಫೆ.17ರಂದು ಹಾಲಾಡಿಯಲ್ಲಿ ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್ ಉದ್ಘಾಟನೆ

Update: 2020-02-16 16:59 GMT

ಉಡುಪಿ, ಫೆ.16: ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಸಂಪೂರ್ಣ ಹವಾನಿಯಂತ್ರಿತ ಸುಸಜ್ಜಿತವಾದ ಸಭಾಭವನ ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್ ಇದರ ಉದ್ಘಾಟನೆಯು ಫೆ.17ರಂದು ಬೆಳಗ್ಗೆ 10.15ಕ್ಕೆ ನಡೆಯಲಿದೆ.

ಮದುವೆ ಸಹಿತ ವಿವಿಧ ಶುಭ ಕಾರ್ಯಕ್ರಮಗಳಿಗೆ ಕೈಗೆಟಕುವ ದರದಲ್ಲಿ ಈ ಸಭಾಂಗಣ ನಿರ್ಮಾಣ ಮಾಡಲಾಗಿದ್ದು, ಇದರ ಜತೆಗೆ ಓಪನ್ ಗಾರ್ಡನ್ ಸಭಾಂಗಣದ ವ್ಯವಸ್ಥೆ ಕೂಡ ಇದೆ. ಈ ತೆರೆದ ಸಭಾಂಗಣದಲ್ಲಿ ಮದುವೆ ಇನ್ನಿತರ ಸಮಾರಂಭ ಡೆಸಲು ಅವಕಾಶ ನೀಡಲಾಗುತ್ತದೆ.
ಸಂಪೂರ್ಣ ಹವಾನಿಯಂತ್ರಿತ 750 ಆಸನಗಳು, ವಿಶಾಲವಾದ ಊಟದ ಹಾಲ್, ಅಡುಗೆ ಕೋಣೆ (ವೆಜ್ ಮತ್ತು ನಾನ್‌ವೆಜ್ ಪ್ರತ್ಯೇಕ), ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, 22 ಸಾವಿರ ಚದರ ವಿಸ್ತೀರ್ಣವಾದ ಸ್ಥಳ, ಸಭಾಂಗಣದ ಅತಿ ಸನಿಹದಲ್ಲೇ ಅನುಗ್ರಹದಾತ ಶ್ರೀಪ್ರಸನ್ನ ಗಣಪತಿ ಮಂದಿರ ಇದೆ. 1000 ಆಸನಗುಳ್ಳ ಓಪನ್ ಗಾರ್ಡನ್ ಸಭಾಂಗಣ, ವಿಶಾಲವಾದ ಊಟದ ಹಾಲ್, ವೆಜ್ ಮತ್ತು ನಾನ್‌ವೆಜ್‌ಗೆ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆ ಮಾಡಲಾಗಿದೆ.

ಉದ್ಘಾಟನಾ ಸಮಾರಂಭದ ಪ್ರಯುಕ್ತ ಸಂಜೆ 5 ರಿಂದ 6 ಗಂಟೆವರೆಗೆ ಆನಂದ ಶೆಟ್ಟಿ ಮತ್ತು ಬಳಗದವರಿಂದ ಹಾಗೂ ಸಂಜೆ 6 ರಿಂದ 7 ರ ವರೆಗೆ ಭೋಜರಾಜ್ ಕಿದಿಯೂರು ಬಳಗದಿಂದ ಭಜನಾ ಕಾರ್ಯಕ್ರಮ, ಸಂಜೆ 7 ರಿಂದ ಪೆರ್ಡೂರು ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರಿಂದ ರತ್ನಾವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News