ಸಾಯ್ ಟ್ರಯಲ್ಸ್: ಕಿರಣ್ ರಿಜಿಜು ಆಹ್ವಾನ ತಿರಸ್ಕರಿಸಿದ ಕಂಬಳ ಓಟಗಾರ ಶ್ರೀನಿವಾಸ ಗೌಡ

Update: 2020-02-16 17:50 GMT

ಮಂಗಳೂರು, ಫೆ.16: ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ಅಗ್ರ ಕೋಚ್‌ಗಳಿಂದ ಟ್ರಯಲ್ಸ್ (ಸಾಮರ್ಥ್ಯ ಪರೀಕ್ಷೆ)ಗೆ ಆಹ್ವಾನಿಸುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ ಒಂದು ದಿನಗಳ ಬಳಿಕ ಶ್ರೀನಿವಾಸ ಗೌಡ, ತನಗೆ ಆ ಬಗ್ಗೆ ಆಸಕ್ತಿ ಇಲ್ಲ ಹಾಗೂ ತಾನು ಕಂಬಳದಲ್ಲೇ ಗಮನ ಕೇಂದ್ರೀಕರಿಸುವುದಾಗಿ ತಿಳಿಸಿದ್ದಾರೆ.

ಸೂರ್ಯ-ಚಂದ್ರ ಕಂಬಳ ನಡೆಯುತ್ತಿರುವ ವೇಣೂರು-ಪೆರ್ಮುದೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಗೌಡ, ಕಂಬಳದ ಕಾರಣಕ್ಕೆ ತಾನು ಜನಪ್ರಿಯನಾಗಿರುವುದು ಸಂತಸ ತಂದಿದೆ. ಅದಕ್ಕೆ ಎಲ್ಲರಿಗೂ ಕೃತಜ್ಞತೆ ಎಂದಿದ್ದಾರೆ. ಸೋಮವಾರ ನಡೆಯಲಿರುವ ಸಾಯ್ ಟ್ರಯಲ್‌ನಲ್ಲಿ ತಾನು ಭಾಗವಹಿಸುವುದಿಲ್ಲ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಹ್ವಾನದಂತೆ ತಾನು ಸೋಮವಾರ ಬೆಂಗಳೂರಿನಲ್ಲಿ ಅವರನ್ನು ಭೇಟಿಯಾಗಲಿದ್ದೇನೆ ಎಂದು ಗೌಡ ಹೇಳಿದ್ದಾರೆ.

‘‘ಕಂಬಳದಲ್ಲಿ ಹಿಮ್ಮಡಿ ಪ್ರಮುಖ ಪಾತ್ರ ವಹಿಸಿದರೆ, ಟ್ರಾಕ್ ಓಟದಲ್ಲಿ ಕಾಲ್ಬೆರಳುಗಳು ಪ್ರಮುಖ ಪಾತ್ರ ವಹಿಸುತ್ತದೆ. ಕಂಬಳದಲ್ಲಿ ಓಟಗಾರನಿಗೆ ಮಾತ್ರವಲ್ಲ ಕೋಣಗಳಿಗೆ ಕೂಡ ಪ್ರಮುಖ ಪಾತ್ರ ಇರುತ್ತದೆ. ಆದರೆ, ಟ್ರಾಕ್ ಓಟದಲ್ಲಿ ಹೀಗೆ ಇರುವುದಿಲ್ಲ’’ ಎಂದು ಅವರು ತಿಳಿಸಿದರು. ಕಂಬಳ ಓಟದಿಂದ ಎಷ್ಟು ಆದಾಯ ಸಿಗುತ್ತದೆ ಎಂಬುದನ್ನು ಗೌಡ ಅವರು ಬಹಿರಂಗಪಡಿಸಿಲ್ಲ. ಆದರೆ, ಕಂಬಳ ಓಟದಿಂದ ನನಗೆ ಬೇಕಾದಷ್ಟು ಆದಾಯ ಬರುತ್ತದೆ. ಇದರಲ್ಲಿ ನಾನು ಸಂತೋಷವಾಗಿ ಇದ್ದೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News