ಫೆ.21: ‘ಅಬ್ಬ’ ಚಲನಚಿತ್ರ ತೆರೆಗೆ

Update: 2020-02-16 17:53 GMT

ಮಂಗಳೂರು, ಫೆ.16: ಕ್ಯಾಪ್‌ಮೆನ್ ಮೀಡಿಯಾ ಮೇಕರ್ಸ್‌ ಲಾಂಛನದಡಿ ನಿರ್ಮಾಣಗೊಂಡಿರುವ ಎಂಜಿ ರಹೀಂ ರಚಿಸಿ, ನಿರ್ದೇಶಿಸಿರುವ ‘ಅಬ್ಬ’ ಚಲನಚಿತ್ರವು ಫೆ.21ರಂದು ನಗರದ ಫಿಝಾ ಮಾಲ್‌ನ ‘ಪಿವಿಆರ್’ನಲ್ಲಿ ಪ್ರದರ್ಶನಗೊಳ್ಳಲಿದೆ.

ವರ್ಷದ ಹಿಂದೆಯೇ ನಿರ್ಮಾಣಗೊಂಡಿದ್ದ ಈ ಚಿತ್ರವು ತಾಂತ್ರಿಕ ತೊಂದರೆಯಿಂದಾಗಿ ಪ್ರದರ್ಶನ ಕಂಡಿರಲಿಲ್ಲ. ಇದೀಗ ಎಲ್ಲಾ ಅಡೆತಡೆಗಳನ್ನೂ ನಿವಾರಿಸಿ ಫೆ.21ರಂದು ಬಿಡುಗಡೆಗೊಳ್ಳಲಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅಬ್ಬ’ ಪ್ರದರ್ಶನ ಕಂಡಿತ್ತು.

ಸಾಹಿತಿ ಮುಹಮ್ಮದ್ ಬಡ್ಡೂರ್, ರೂಪಾ ವರ್ಕಾಡಿ, ರಹೀಂ ಸಚ್ಚೇರಿಪೇಟೆ, ಶುಭಾಂಗಿ, ಸತ್ತಾರ್ ಗೂಡಿನಬಳಿ, ಎಂ.ಕೆ.ಮಠ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕುಟುಂಬದ ಸದಸ್ಯರು ವೀಕ್ಷಿಸಬಹುದಾದ ಬ್ಯಾರಿ ಭಾಷೆಯ ಸುಮಾರು 2 ತಾಸಿನ ಈ ಚಿತ್ರದಲ್ಲಿ ಅಪ್ಪಟ ಬ್ಯಾರಿ ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಸುಂದರವಾದ ಮೂರು ಹಾಡಿವೆ. ಜೊತೆಗೆ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಒತ್ತು ನೀಡಲಾಗಿದೆ. ಫೆ.21ರಿಂದ ಪಿವಿಆರ್‌ನಲ್ಲಿ ಪ್ರದರ್ಶನಗೊಳ್ಳಲಿದ್ದು, ವೀಕ್ಷಕರ ಪ್ರತಿಕ್ರಿಯೆ ಗಮನಿಸಿ ಇತರ ಕಡೆ ಪ್ರದರ್ಶಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಚಿತ್ರದ ನಿರ್ಮಾಪಕರೂ ಆಗಿರುವ ಎಂಜಿ ರಹೀಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News