ಗುಡ್ಡೆಅಂಗಡಿ: 40ನೇ ವರ್ಷದ ಉರೂಸ್ ಸಮಾರೋಪ

Update: 2020-02-16 18:57 GMT

ಬಂಟ್ವಾಳ: ಇಸ್ಲಾಮಿನಲ್ಲಿ ದಾನ-ಧರ್ಮಗಳಿಗೆ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದ್ದು, ದಾನ-ಧರ್ಮಗಳಿಗೆ ಮಹತ್ತರ ಪ್ರತಿಫಲದ ಭರವಸೆ ನೀಡಲಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ದಾನ-ಧರ್ಮಗಳು ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ವೈರಲ್ ಮಾಡಲು ಮಹತ್ವ ಪಡೆದುಕೊಳ್ಳುತ್ತಿರುವುದು ಅತ್ಯಂತ ದುಃಖದ ವಿಚಾರವಾಗಿದೆ ಎಂದು ಪುತ್ತೂರು-ಕಲ್ಲೆಗ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು.

ಅವರು ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯಲ್ಲಿ 40ನೇ ವರ್ಷದ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಶನಿವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ದಾನ-ಧರ್ಮಗಳು ಅಲ್ಲಾಹನು ವ್ಯಕ್ತಿಗೆ ನೀಡಿದ ಸಂಪತ್ತಿನ ಭಾಗವನ್ನು ಬಡವರಿಗೆ ನೀಡುವ ನ್ಯಾಯೋಚಿತ ಹಕ್ಕಾಗಿದ್ದು, ಅದನ್ನು ಧನಿಕ ತನ್ನ ಉದಾರತೆ ಎಂಬ ಅಹಂಕಾರದಿಂದ ತಾನು ಬಡ-ಬಗ್ಗರಿಗೆ ನೀಡಿದ್ದನ್ನು ಬಹಿರಂಗವಾಗಿ ಫೋಟೋ ಶೇರ್ ಮಾಡುವ ಮೂಲಕ ಬಡವರನ್ನು ಅವಮಾನಿಸಿದಂತೆ. ಬಡವರ, ದೀನ-ದಲಿತರ ಅವಮಾನ ಮಾಡುವುದು ನೀಡಿದ ದಾನದ ಪ್ರತಿಫಲಕ್ಕೆ ಕುಂದು ಉಂಟುಮಾಡುವುದರ ಜೊತೆಗೆ ಪರಲೋಕದಲ್ಲಿ ಭಗವಂತನ ಘನ ಘೋರ ದ್ವೇಷಕ್ಕೂ ಕಾರಣವಾದೀತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News