ಎಸ್ಕೆಎಸ್ಸೆಸ್ಸೆಫ್ ವಿಖಾಯದಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ

Update: 2020-02-17 06:20 GMT

ಪುತ್ತೂರು, ಫೆ.17: ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯ ವಿಖಾಯ ವತಿಯಿಂದ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ವಠಾರದಲ್ಲಿ ರವಿವಾರ ಪರಿಸರ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯ ವಿಖಾಯ ಕಾರ್ಯದರ್ಶಿ ಕೆ.ಎಸ್.ಆಸಿಫ್ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ಕೆ ಸೈಯದ್ ಅಲಿ ತಂಙಳ್ ದುಆ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಪುತ್ತೂರು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ರಫೀಕ್ ದರ್ಬೆ, ಪುತ್ತೂರು ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಜೋಡುಪಾಲ ದುರಂತದಲ್ಲಿ ಸಕ್ರಿಯ ಸೇವೆ ಮಾಡಿದ್ದಾರೆ. ಅಲ್ಲದೆ ರಕ್ತದಾನ ಶಿಬಿರ ಹಾಗೂ ಸ್ವಚ್ಛತಾ ಕಾರ್ಯ ಸೇರಿದಂತೆ ಹಲವಾರು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾನೀಯ ಎಂದರು.

ಪುತ್ತೂರು ಸರ್ಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞೆ ಡಾ.ಝೈನಬಾ, ಮೂಳೆ ತಜ್ಞ ಡಾ.ಅಜೇಯ್ ಶುಭ ಹಾರೈಸಿದರು. ಪುತ್ತುರು ವಲಯ ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಜಾಬಿರ್ ಪೈಝಿ ಬನಾರಿ, ಕೋಶಾಧಿಕಾರಿ ಆಶ್ರಫ್ ಮುಕ್ವೆ, ವಿಖಾಯ ಅಧ್ಯಕ್ಷ ಸಿದ್ದೀಕ್ ಸುಲ್ತಾನ್, ಜಿಲ್ಲಾ ಉಪಾಧ್ಯಕ್ಷ ಇಬ್ರಾಹೀಂ ಕಡವ, ವಲಯ ಸಹಚಾರಿ ಕಾರ್ಯದರ್ಶಿ ಹನೀಫ್ ಹಾಜಿ ಕಲ್ಲೇಗ, ಸಂಘಟನಾ ಕಾರ್ಯದರ್ಶಿ ನಝೀರ್ ಅರ್ಶದಿ, ಟ್ರೆಂಡ್ ಕಾರ್ಯದರ್ಶಿ ಯೂಸುಫ್ ಮುಂಡೋಳೆ, ಕ್ಯಾಂಪಸ್ ಕಾರ್ಯದರ್ಶಿ ಆಶಿಕ್ ಮುಂಡೋಳೆ, ಇಬಾದ್ ಕಾರ್ಯದರ್ಶಿ ರಝಾಕ್ ಅಝರಿ, ವಿಖಾಯ ಆಕ್ಟೀವ್ ವಿಂಗ್ ಸದಸ್ಯ ಹನೀಫ್ ಮುಕ್ವೆ ಸಹಿತ ವಿಖಾಯ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News