ಫರಂಗಿಪೇಟೆ: ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನಾಚರಣೆ

Update: 2020-02-17 07:37 GMT

ಫರಂಗಿಪೇಟೆ, ಫೆ. 17: ‘ಸ್ವಾತಂತ್ರ್ಯದ ಕಾವಲುಗಳಾಗಿರಿ’ ಎಂಬ ದ್ಯೇಯ ವಾಕ್ಯದೊಂದಿಗೆ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆಯನ್ನು ದೇಶಾದ್ಯಂತ ಇಂದು  ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಸೋಮವಾರ    ಫರಂಗಿಪೇಟೆಯಲ್ಲಿ ಸಂಸ್ಥಾಪನಾ ದಿನ ಆಚರಿಸಲಾಯಿತು.

ಪಿಎಫ್ಐ ಫರಂಗಿಪೇಟೆ ವಲಯಾಧ್ಯಕ್ಷ ಬಶೀರ್ ಅಮೆಮ್ಮಾರ್ ಧ್ವಜಾರೋಹಣಗೈದರು.

 ಈ ಸಂದರ್ಭದಲ್ಲಿ ಮಾತನಾಡಿದ ಪಿಎಫ್ಐ ಮುಖಂಡ ಜಮಾಲುದ್ದೀನ್ ಫರಂಗಿಪೇಟೆ  ಜಾತಿ-ಮತ  ಮತ್ತು ರಾಜಕೀಯ ಭೇದವಿಲ್ಲದಿರುವ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲುಗೊಳಿಸಿ ಸಾಮಾಜಿಕ ವ್ಯವಸ್ಥೆಯನ್ನು ನಾಶಗೊಳಿಸಿ ಹಿಂದುತ್ವ ಅಜೆಂಡಾವನ್ನು ಹೇರಲು ಫ್ಯಾಶಿಸ್ಟ್ ಶಕ್ತಿಗಳು ಶ್ರಮಿಸುತ್ತಿವೆ.  ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಪ್ರಜ್ಞಾವಂತ ನಾಗರಿಕರೆಲ್ಲರೂ ಸಂವಿಧಾನದ ರಕ್ಷಣೆಗೆ ಒಂದುಗೂಡಿ ಹೋರಾಟ ನಡೆಸಬೇಕಾಗಿದೆ ಎಂದರು.

ಎಸ್ಡಿಪಿಐ ಮುಖಂಡರಾದ ಹಾಜಿ ಸುಲೈಮಾನ್ ಉಸ್ತಾದ್, ಹತ್ತನೇ ಮೈಲ್ ಕಲ್ಲು ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಲಿ, ಫರಂಗಿಪೇಟೆ ಮಸೀದಿ ಆಡಳಿತ ಸಮಿತಿ ಸದಸ್ಯ ಎಸ್.ಹಸನಬ್ಬ, ಪಿಎಫ್ಐ ಫರಂಗಿಪೇಟೆ ವಲಯ ಕಾರ್ಯದರ್ಶಿ ನಝೀರ್ ಹತ್ತನೇ ಮೈಲ್ ಕಲ್ಲು, ಎಸ್ಡಿಪಿಐ ಮುಖಂಡ ಇಕ್ಬಾಲ್ ಅಮೆಮ್ಮಾರ್, ಸೋಶಿಯಲ್ ಫೋರಂ ಮಾರಿಪ್ಪಳ್ಳ ಇದರ ಅಧ್ಯಕ್ಷ ಫಯಾಝ್ ಉಪಸ್ಥಿತರಿದ್ದರು,

 ಶರೀಫ್ ಅಮೆಮ್ಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News