ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ; ಇಬ್ಬರು ಮಹಿಳೆಯರು ಮೃತ್ಯು

Update: 2020-02-17 12:42 GMT

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಮಗುಚಿ ಬಿದ್ದು ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಇಂದಬೆಟ್ಟು ಗ್ರಾಮದ ಪಡಂಬಿಲ ಎಂಬಲ್ಲಿ  ಸೋಮವಾರ ಸಂಭವಿಸಿದೆ.

ಮೃತರನ್ನು ನಡ ಗ್ರಾಮದ ಜೊಲ್ಲೊಟ್ಟು ನಿವಾಸಿ ಹಾಜಿರಾಬಿ (55) ಹಾಗೂ ನಡಬೈಲು ದರ್ಖಾಸು ನಿವಾಸಿ ಸಾಜಿದಾಬಿ ಎಂದು ಗುರುತಿಸಲಾಗಿದೆ.

ರಿಕ್ಷಾದಲ್ಲಿದ್ದ ಮಮ್ತಾಝ್ (30) ಹಾಗೂ ಶೈನಾಝ್ (29)  ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಕ್ಷಾ ಚಾಲಕ ನವೀದ್ ಎಂಬವರೂ ಗಾಯಗೊಂಡಿದ್ದು, ಬೆಳ್ತಂಗಡಿ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News