ಮಂಗಳೂರು ವಿಮಾನ ನಿಲ್ದಾಣ: ಅಕ್ರಮ ಚಿನ್ನ ಸಾಗಾಟ; ಇಬ್ಬರ ಬಂಧನ

Update: 2020-02-17 13:51 GMT

ಮಂಗಳೂರು, ಫೆ.17: ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ 58.95 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಆರೋಪದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

ಕೇರಳದ ಮಲಪ್ಪುರಂನ ಚಪ್ಪತ್ತೋಡಿ ನಿವಾಸಿ ಮುಹಮ್ಮದ್ ಸ್ವಾಲಿಹ್ (22), ಚೆರುವನಶ್ಯೇರಿ ನಿವಾಸಿ ಮುಹಮ್ಮದ್ ನಿಶಾದ್ (25) ಬಂಧಿತ ಆರೋಪಿಗಳು.

ಘಟನೆ 1: ದುಬೈನಿಂದ ಸ್ಪೈಸ್‌ಜೆಟ್ ‘ಎಸ್‌ಜಿ060’ ಫ್ಲೈಟ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರೋಪಿ ಮುಹಮ್ಮದ್ ಸ್ವಾಲಿಹ್, 32.35 ಲಕ್ಷ ರೂ. ಮೌಲ್ಯದ 24 ಕ್ಯಾರೇಟ್‌ನ ಪೇಸ್ಟ್‌ರೂಪದ 797 ಗ್ರಾಂ ತೂಕದ ಚಿನ್ನವನ್ನು ಗುದನಾಳದಲ್ಲಿಟ್ಟು ಸಾಗಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ 2: ಮತ್ತೊಂದು ಪ್ರಕರಣದಲ್ಲಿ ಆರೋಪಿ ನಿಶಾದ್, ದುಬೈನಿಂದ ಏರ್ ಇಂಡಿಯಾ ‘ಐಎಕ್ಸ್384’ ಫ್ಲೈಟ್‌ನಲ್ಲಿ ಬಂದಿಳಿದಿದ್ದು, 26.59 ಲಕ್ಷ ರೂ. ಮೌಲ್ಯದ 655 ಗ್ರಾಂ ತೂಕದ ಚಿನ್ನವನ್ನು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ್ದನು ಎನ್ನಲಾಗಿದ್ದು, ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

ಆರೋಪಿಗಳನ್ನು ಮಂಗಳೂರು ಹೆಚ್ಚುವರಿ ಪ್ರಧಾನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಕಸ್ಟಮ್ಸ್ ಇಲಾಖೆಯ ಅಧಿಕಾರಿ ಶ್ರೀಲಕ್ಷ್ಮೀ, ಗೋಪಿನಾಥ, ಸವಿತಾ ಕೋಟ್ಯಾನ್, ರಾಮ್‌ ಅವತಾರ್ ಮೀನ, ಇನ್‌ಸ್ಪೆಕ್ಟರ್ ಸಮಲ ಮೋಹನ್ ರೆಡ್ಡಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News