ಫೆ. 23ಕ್ಕೆ ಜಿಲ್ಲಾ ಕೃಷಿಕ ಸಂಘದಿಂದ ರೈತ ಸಮಾವೇಶ-2020

Update: 2020-02-17 15:12 GMT

ಉಡುಪಿ, ಫೆ.17: ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ ‘ರೈತ ಸಮಾವೇಶ-2020’ ಇದೇ ಫೆ.23ರ ರವಿವಾರ ನಗರದ ಕುಂಜಿಬೆಟ್ಟಿನಲ್ಲಿರುವ ಶ್ರೀಶಾರದಾ ಮಂಟಪದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮಾ ಬಂಟಕಲ್ಲು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರ ಪ್ರದೇಶವಲ್ಲದೇ, ಗ್ರಾಮೀಣ ಭಾಗದ ಜನರೂ ಕೃಷಿಯಿಂದ ವಿಮುಖ ರಾಗುತ್ತಿರುವ ಇಂದಿನ ದಿನಗಳಲ್ಲಿ ಕೃಷಿಕರಿಗೆ ಹಾಗೂ ಕೃಷಿ ಆಸಕ್ತರಿಗೆ ಕಡಿಮೆ ಖರ್ಚಿನಲ್ಲಿ ಸುಲದ ಕೃಷಿ, ಹೈನುಗಾರಿಕೆ, ವಿಭಿನ್ನ ಕೃಷಿ ಬೆಳೆಗಳು, ಯಾಂತ್ರೀಕರಣ ವಿಷಯಗಳ ಕುರಿತಂತೆ ಮಾಹಿತಿ ನೀಡಲು ಈ ಸಮಾವೇಶವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ ಎಂದರು.

ಈ ಬಾರಿಯ ಜಿಲ್ಲಾ ರೈತ ಸಮಾವೇಶ ಫೆ.23ರ ಬೆಳಗ್ಗೆ 9:30ರಿಂದ ಸಂಜೆ 4 ರವರೆಗೆ ಶಾರದಾ ಮಂಟಪ ಆವರಣದಲ್ಲಿ ನಡೆಯಲಿದೆ. ಸಮಾವೇಶ ವನ್ನು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಚಿಂತಕರಾದ ಮುನಿರಾಜ ರೆಂಜಾಳ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಕೃಷಿಕರ ಸನ್ಮಾನವೂ ನಡೆಯಲಿದೆ ಎಂದರು.

ಅಪರಾಹ್ನ 12ರಿಂದ ಕೃಷಿಯ ಕುರಿತಂತೆ ವಿವಿಧ ವಿಷಯಗಳ ಕುರಿತು ಮೂರು ವಿಚಾರಗೋಷ್ಠಿಗಳು ನಡೆಯಲಿವೆ. ಇದರಲ್ಲಿ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು, ತಜ್ಞರು, ಪ್ರಗತಿಪರ ಕೃಷಿಕರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಉಪ್ಯಾಸ, ಮಾಹಿತಿಗಳನ್ನು ನೀಡಲಿದ್ದಾರೆ.

ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆ, ಭತ್ತದ ಹೊಸ ತಳಿಗಳು, ಕಸಿ ಗೇರು ಗಿಡಗಳ ಮಹತ್ವ, ಆಹಾರದಿಂದ ಆರೋಗ್ಯ ರಕ್ಷಣೆ, ಹೈನುಗಾರಿಕೆಯಲ್ಲಿ ಮಿತವ್ಯಯದ ಸರಳ ತಾಂತ್ರಿಕತೆ, ಔಷಧಿ ಬೆಳೆಗಳ ಅಗತ್ಯತೆ ಬಗ್ಗೆಯೂ ತಜ್ಞರು ಮಾತನಾಡಲಿದ್ದಾರೆ ಎಂು ರಾಮಕೃಷ್ಣ ಶರ್ಮಾ ತಿಳಿಸಿದರು.

ಅಪರಾಹ್ನ 3 ಗಂಟೆಗೆ ಉಡುಪಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಕೆಂಪೇಗೌಡ ಅಧ್ಯಕ್ಷತೆಯಲ್ಲಿ ಕಂದಾಯ, ವಿದ್ಯುತ್, ತೋಟಗಾರಿಕೆ, ಸಹಕಾರಿ ಇಲಾಖೆಗಳ ರೈತ ಪರ ಯೋಜನೆಗಳು, ವಿವಿಧ ಸಮಸ್ಯೆಗಳ ಪರಿಹಾ -ಮಾರ್ಗೋಪಾಯಗಳ ಕುರಿತ ಮಾಹಿತಿ-ಪ್ರಶ್ನೋತ್ತರಗಳು ನಡೆಯಲಿವೆ.

ರೈತ ಸಮಾವೇಶದಲ್ಲಿ ಜಿಲ್ಲೆಯಲ್ಲಿ ಉತ್ತಮ ಕೃಷಿ ಸಾಧನೆ ಮಾಡಿರುವ ಆರು ಮಂದಿ ಕೃಷಿಕರನ್ನು ಸನ್ಮಾನಿಸಲಾಗುವುದು. ಕೃಷಿ ಮಾಹಿತಿ-ಮಾರ್ಗದರ್ಶನಗಳ ಜೊತೆಗೆ ಮಾರುಕಟ್ಟೆಯಲ್ಲಿ ಲ್ಯವಿರುವ ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ವಿವಿಧ ಬೆಳೆಗಳ ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ಗಿಡಗಳು, ಬೀಜ, ಕೃಷಿ ಸಂಬಂಧಿ ಪುಸ್ತಕ ಮಳಿಗೆಗಳು ಇರುತ್ತವೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಉಪಾಧ್ಯಕ್ಷರಾದ ಮಲ್ಲಂಪಳ್ಳಿ ಶ್ರೀನಿವಾಸ ಬಲ್ಲಾಳ್, ದಿನೇಶ್ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News