ಹಾಲಾಡಿಯ ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್ ಶುಭಾರಂಭ

Update: 2020-02-17 15:36 GMT

ಕುಂದಾಪುರ, ಫೆ.17: ಹಾಲಾಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಅತ್ಯಾ ಧುನಿಕ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಹಾಗೂ ಸಂಪೂರ್ಣ ಹವಾ ನಿಯಂತ್ರಿತ ಸಭಾಭವನ ‘ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್’ ಇದರ ಉದ್ಘಾಟನೆಯನ್ನು ಮಣಿಪಾಲ ಮಾಹೆಯ ಪ್ರೊಚಾನ್ಸೆಲರ್ ಡಾ.ಎಚ್.ಎಸ್. ಬಲಾ್ಲಳ್ ಸೋಮವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶವಾಗಿರುವ ಹಾಲಾಡಿ ಯಲ್ಲಿ ಉತ್ತಮ ಸೌಕರ್ಯಗಳನ್ನು ಒಳಗೊಂಡ ಹಾಲ್ ನಿರ್ಮಿಸುವ ಮೂಲಕ ಬಡ ಜನರಿಗೆ ಕಡಿಮೆ ದರದಲ್ಲಿ ಸಭಾಂಗಣವನ್ನು ಒದಗಿಸಿಕೊಡಲಾಗಿದೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಬಡವರು ಇದರ ಸದುಪಯೋಗ ಮಾಡಿ ಕೊಳ್ಳಬೇಕು. ಸಮಾಜದಲ್ಲಿ ಸಾಕಷ್ಟು ಶ್ರೀಮಂತರಿದ್ದರೂ ದಾನ ಮಾಡುವ ವಿಚಾರ ದಲ್ಲಿ ಹಿಂಜರಿಯುತ್ತಾರೆ. ಆದರೆ ಅದರಲ್ಲಿ ಜಿ.ಶಂಕರ್ ಮಾತ್ರ ವಿಭಿನ್ನರು ಎಂದು ತಿಳಿಸಿದರು.

ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ.ಶಂಕರ್ ಮಾತ ನಾಡಿ, ಹಾಲಾಡಿ, ಸಿದ್ಧಾಪುರ ನನ್ನ ಕರ್ಮ ಭೂಮಿಯಾಗಿದೆ. ಬಡವರ ಶಕ್ತಿ ಕೇಂದ್ರವಾಗಿ ಹಾಲಾಡಿಯನ್ನು ಮಾಡಿ, ಎಲ್ಲ ಜಾತಿಯ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಲಾಗುವುದು. ಈ ಹಾಲ್‌ ನಲ್ಲಿ ಪ್ರತಿ ತಿಂಗಳ ಒಂದು ಶನಿವಾರ ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯ ಕ್ರಮಗಳನ್ನು ನಡೆಸಲಾಗುವುದು ಎಂದರು.

ಮೊಗವೀರ ಯುವ ಸಂಘಟನೆಯ ಉಚಿತ ಸಾಮೂಹಿಕ ವಿವಾಹದ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಕೂಡ ಮಾರ್ಚ್ ತಿಂಗಳಲ್ಲಿ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಯಾವುದೇ ಜಾತಿಯವರ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೂ ಈ ಹಾಲ್‌ನ್ನು ಉಚಿತವಾಗಿ ನೀಡಲಾುವುದು ಎಂದು ಅವರು ಹೇಳಿದರು.

ಜ್ಯೋತಿಷ್ಯ ಕಬ್ಯಾಡಿ ಜಯರಾಮ ಆಚಾರ್ಯ, ಉದ್ಯಮಿ ಭುವನೇಂದ್ರ ಕಿದಿಯೂರು, ಮೊಗವೀರ ಮಹಾಜನ ಸಂಘದ ಬಗ್ವಾಡಿ ಹೋಬಳಿ ಅಧ್ಯಕ್ಷ ಕೆ.ಕೆ.ಕಾಂಚನ್, ಬಾರಕೂರು ಹೋಬಳಿ ಅಧ್ಯಕ್ಷ ಸತೀಶ್, ವ್ನಿೇಶ್ ಅಡಿಗ, ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಶಿವರಾಮ್ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಕುಟುಂಬಸ್ಥರಾದ ಶಾಲಿನಿ ಶಂಕರ್, ಶ್ಯಾಮಿಲಿ, ನವೀನ್, ಶಿವಣ್ಣ ಉಪಸ್ಥಿತರಿದ್ದರು. ಜಿಲ್ಲಾ ಮೊಗವೀರ ಯುವ ಸಂಘಟನೆ ಮಾಜಿ ಅಧ್ಯಕ್ಷ ಗಣೇಶ್ ಕಾಂಚನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಜೆ, ಆನಂದ ಶೆಟ್ಟಿ ಮತ್ತು ಭೋಜರಾಜ್ ಕಿದಿಯೂರು ಬಳಗ ದಿಂದ ಭಜನಾ ಕಾರ್ಯಕ್ರಮ, ಪೆರ್ಡೂರು ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರಿಂದ ರತ್ನಾವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.

ಸಂಪೂರ್ಣ ಹವಾನಿಯಂತ್ರಿತ 750 ಆಸನಗಳು, ವಿಶಾಲವಾದ ಊಟದ ಹಾಲ್, ಅಡುಗೆ ಕೋಣೆ (ವೆಜ್ ಮತ್ತು ನಾನ್‌ವೆಜ್ ಪ್ರತ್ಯೇಕ), ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, 22 ಸಾವಿರ ಚದರ ವಿಸ್ತೀರ್ಣವಾದ ಸ್ಥಳ, ಸಭಾಂಗಣದ ಅತಿ ಸನಿಹದಲ್ಲೇ ಅನುಗ್ರಹದಾತ ಶ್ರೀಪ್ರಸನ್ನ ಗಣಪತಿ ಮಂದಿರ ಇದೆ. 1000 ಆಸನಗುಳ್ಳ ಓಪನ್ ಗಾರ್ಡನ್ ಸಭಾಂಗಣ, ವಿಶಾಲವಾದ ಊಟದ ಹಾಲ್, ವೆಜ್ ಮತ್ತು ನಾನ್‌ವೆಜ್‌ಗೆ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News