ಕೊರೋನ ಪೀಡಿತ ಹಡಗಿನ ಪ್ರಯಾಣಿಕರಿಗೆ 2,000 ಉಚಿತ ಐಫೋನ್ : ಕಾರಣವೇನು ಗೊತ್ತಾ?

Update: 2020-02-17 15:37 GMT

 ಟೋಕಿಯೊ (ಜಪಾನ್), ಫೆ. 17: ಜಪಾನ್‌ನ ಯೊಕೊಹಾಮದಲ್ಲಿ ದಿಗ್ಬಂಧನದಲ್ಲಿರುವ ‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿರುವ ಪ್ರವಾಸಿಗರಿಗೆ ಸುಮಾರು 2,000 ಉಚಿತ ಐಫೋನ್‌ಗಳನ್ನು ಜಪಾನ್ ಸರಕಾರ ವಿತರಿಸಿದೆ ಎಂದು ವರದಿಯಾಗಿದೆ.

ಸುಮಾರು 3,700 ಪ್ರವಾಸಿಗರನ್ನು ಹೊತ್ತ ಹಡಗಿನಲ್ಲಿ ಕೊರೋನವೈರಸ್ ಸೋಂಕು ಹರಡಿದ ಬಳಿಕ ಅದನ್ನು ಹೊರಜಗತ್ತಿನಿಂದ ಪ್ರತ್ಯೇಕಿಸಲಾಗಿದೆ. ಹಡಗಿನ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಫೋನ್‌ಗಳನ್ನು ವಿತರಿಸಲಾಗಿದೆ.

 ವೈದ್ಯರೊಂದಿಗೆ ಸಂಪರ್ಕದಲ್ಲಿರಲು, ವೈದ್ಯರನ್ನು ಭೇಟಿಯಾಗಲು ಮನವಿ ಸಲ್ಲಿಸಲು, ಔಷಧಿಗಳ ವಿವರಗಳನ್ನು ಪಡೆಯಲು ಹಾಗೂ ಮಾನಸಿಕ ಕ್ಷೋಭೆಯನ್ನು ಮಾನಸಿಕ ತಜ್ಞರಿಗೆ ವಿವರಿಸಲು ನೆರವಾಗುವುದಕ್ಕಾಗಿ ಅವರಿಗೆ ಐಫೋನ್‌ಗಳನ್ನು ವಿತರಿಸಲಾಗಿದೆ ಎನ್ನಲಾಗಿದೆ.

ಹಡಗಿನಲ್ಲಿರುವವರ ಪೈಕಿ 350ಕ್ಕೂ ಅಧಿಕ ಮಂದಿಯಲ್ಲಿ ಕೊರೋನವೈರಸ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಹಡಗು ಈಗ ಭಯಾನಕ ಸೋಂಕಿನ ಕೇಂದ್ರ ಬಿಂದುವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News