ಚೀನಾ: ಕೊರೋನವೈರಸ್‌ಗೆ ಬಲಿಯಾದವರ ಸಂಖ್ಯೆ 1,765ಕ್ಕೆ

Update: 2020-02-17 15:39 GMT

ಬೀಜಿಂಗ್ (ಚೀನಾ), ಫೆ. 17: ಚೀನಾದಲ್ಲಿ ಕೊರೋನವೈರಸ್ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಸೋಮವಾರ 1,765ನ್ನು ತಲುಪಿದೆ. ಸೋಂಕಿನ ಭೀಕರ ಪರಿಣಾಮಕ್ಕೆ ಒಳಗಾಗಿರುವ ಹುಬೈ ಪ್ರಾಂತದಲ್ಲಿ ಒಂದು ದಿನದ ಅವಧಿಯಲ್ಲಿ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದೇ ಅವಧಿಯಲ್ಲಿ 1933 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ ಎಂಬುದಾಗಿಯೂ ತನ್ನ ದೈನಂದಿನ ಹೇಳಿಕೆಯಲ್ಲಿ ಹುಬೈಯ ಆರೋಗ್ಯ ಆಯೋಗ ತಿಳಿಸಿದೆ. ಇದರೊಂದಿಗೆ ಚೀನಾದ್ಯಂತ ಈಗ ಸೋಂಕಿಗೆ ಒಳಗಾಗಿರುವವರ ಒಟ್ಟು ಸಂಖ್ಯೆ ಕನಿಷ್ಠ 70,400 ಆಗಿದೆ.

ಕಳೆದ ವಾರದ ಹೊಸ ಸೋಂಕು ಪೀಡಿತರ ಸಂಖ್ಯೆಗೆ ಹೋಲಿಸಿದರೆ, ಸೋಮವಾರದ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಸೋಮವಾರದ ಸಂಖ್ಯೆಯು ರವಿವಾರದ ಸಂಖ್ಯೆಗಿಂತ ಸುಮಾರು 100 ಅಧಿಕವಾಗಿದೆ. ಆದರೆ, ಶುಕ್ರವಾರ ಮತ್ತು ಶನಿವಾರದ ಸಂಖ್ಯೆಗೆ ಹೋಲಿಸಿದರೆ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News