×
Ad

ಚೇತರಿಸಿಕೊಂಡ ಕೊರೋನವೈರಸ್ ರೋಗಿಗಳಿಂದ ಪ್ಲಾಸ್ಮಾ ದಾನ

Update: 2020-02-17 21:11 IST

ವುಹಾನ್ (ಚೀನಾ), ಫೆ. 17: ಕೊರೋನವೈರಸ್ ಸೋಂಕಿನ ಕೇಂದ್ರ ಬಿಂದು ವುಹಾನ್‌ನಲ್ಲಿ ಕಾಯಿಲೆಯಿಂದ ಚೇತರಿಸಿಕೊಂಡ 20 ರೋಗಿಗಳು ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ಲಾಸ್ಮಾ (ರಕ್ತ) ದಾನ ಮಾಡಿದ್ದಾರೆ ಎಂದು ಹುಬೈ ಪ್ರಾಂತದ ಕೋವಿಡ್-19 ವೈದ್ಯಕೀಯ ಸಂಶೋಧನಾ ತಂಡವೊಂದು ರವಿವಾರ ತಿಳಿಸಿದೆ.

ಜಿಯಾಂಗ್‌ಕ್ಸಿಯ ಜಿಲ್ಲೆಯಲ್ಲಿರುವ ಚೀನಾದ ಸಾಂಪ್ರದಾಯಿಕ ಚೀನಾ ಔಷಧಿಗಳ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿರುವ ವೈದ್ಯರು ಮತ್ತು ನರ್ಸ್‌ಗಳು ಪ್ಲಾಸ್ಮಾ ದಾನ ಮಾಡಿದವರು ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗಂಭೀರ ಅವಸ್ಥೆಯಲ್ಲಿರುವ 12 ರೋಗಿಗಳು ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News