ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

Update: 2020-02-17 16:49 GMT

ಕುಂದಾಪುರ, ಫೆ.17: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಡಿಸಿಐಬಿ ಪೊಲೀಸರು ಫೆ.16ರಂದು ಸಂಜೆ 5ಗಂಟೆ ಸುಮಾರಿಗೆ ವಕ್ವಾಡಿ ಗ್ರಾಮದ ಜನತಾ ಕಾಲನಿ ಎಂಬಲ್ಲಿ ಬಂಧಿಸಿದ್ದಾರೆ.

ವಕ್ವಾಡಿ ಜನತಾ ಕಾಲನಿಯ ಮೊಹಮ್ಮದ್ ಹನೀಫ್ (45) ಹಾಗೂ ಅಶ್ರಫ್(29) ಬಂಧಿತ ಆರೋಪಿಗಳು. ದಾಳಿ ವೇಳೆ ಮೊಹಮ್ಮದ್ ಆಸೀಫ್ ಹಾಗೂ ಇಲಿಯಾಸ್ ಓಡಿ ಪರಾರಿಯಾಗಿದ್ದಾರೆ. ಬಂಧಿತರಿಂದ 20ಸಾವಿರ ರೂ. ಮೌಲ್ಯದ 610 ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್, ಬ್ಯಾಗ್ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊಹಮ್ಮದ್ ಹನೀಫ್ ತನ್ನ ಮನೆಯ ಬಳಿ ಇರುವ ಶೆಡ್‌ನಲ್ಲಿ ಇತರ ಮೂವರೊಂದಿಗೆ ಸೇರಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿ ರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದ ತಂಡ, ಇಬ್ಬರನ್ನು ಬಂಧಿಸಿದೆ. ಈ ಬಗ್ಗೆ ಕುಂದಾಪುರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News